ನವದೆಹಲಿ: 15 ವರ್ಷ ಹಳೆಯ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲ ಎನ್ನುವ ನೀತಿಯನ್ನು ಶೀಘ್ರದಲ್ಲಿ ಜಾರಿಗೆ ತರಲಿದ್ದು, 15 ವರ್ಷದ ವಾಹನ ಗುಜರಿ ಸೇರಲಿವೆ ಎನ್ನಲಾಗಿದೆ.
ಕೇಂದ್ರ ಸಂಸ್ಥೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿ ನೀಡಿದ್ದು, ಹದಿನೈದು ವರ್ಷ ಹಳೆ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವ ಹೊಸ ನೀತಿಯ ಕುರಿತು ಸಚಿವಾಲಯದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಂಪುಟದ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮತ್ತು ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಸಚಿವಾಲಯ 15 ವರ್ಷದ ಹಳೆಯ ವಾಹನ ಗುಜರಿಗೆ ಹಾಕುವ ನೀತಿ ಜಾರಿಗೆ ಜಾರಿಗೆ ತಂದಲ್ಲಿ ವಾಹನಗಳು ಉತ್ತಮ ಸ್ಥಿತಿಯಲ್ಲಿದ್ದರೂ 15 ವರ್ಷ ಮೇಲ್ಪಟ್ಟ ಕಾರಣ ಗುಜರಿಗೆ ಹಾಕಬೇಕಾಗುತ್ತದೆ ಎನ್ನಲಾಗಿದೆ.
15 ವರ್ಷಕ್ಕಿಂತ ಹಳೆಯದಾದ ಕಾರು, ಬಸ್, ಟ್ರಕ್ ಗಳನ್ನು ಗುಜರಿಗೆ ಹಾಕಲಾಗುವುದು. ಬಜೆಟ್ನಲ್ಲಿ ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ಹೊರಹಾಕುವ ಮೂಲಕ ವಾಹನ ಬೇಡಿಕೆಯನ್ನು ಹೆಚ್ಚಿಸುವ ಗುರಿ ಹೊಂದಿರುವ ವಾಹನ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ.