ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವಾಗ ಅನೇಕ ಶಾಲೆಗಳು ಆಧಾರ್ ಕಾರ್ಡ್ ಕೇಳುತ್ತವೆ. ಡಿಸೆಂಬರ್ ನಲ್ಲಿ ನರ್ಸರಿಗೆ ಅರ್ಜಿಗಳನ್ನು ನೀಡಲಾಗುತ್ತದೆ. ಜನವರಿ ವೇಳೆಗೆ ಪ್ರವೇಶ ಪ್ರಕ್ರಿಯೆ ಶುರುವಾಗುತ್ತದೆ. ಮಕ್ಕಳ ಆಧಾರ್ ಕಾರ್ಡ್ ಪಡೆಯುವುದು ಹೇಗೆ ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತದೆ.
ಮಕ್ಕಳಿಗೆ ಆಧಾರ್ ಕಾರ್ಡ್ ಅಗತ್ಯ. ಯಾವುದೇ ವಯಸ್ಸಿನ ವ್ಯಕ್ತಿಯು ಆಧಾರ್‌ಗೆ ಅರ್ಜಿ ಸಲ್ಲಿಸಬಹುದು. ನವಜಾತ ಶಿಶುವಿಗೂ ಆಧಾರ್ ಕಾರ್ಡ್ ಪಡೆಯಬಹುದು. ಪೋಷಕರು ಮಗುವಿನೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಫಾರ್ಮ್ ಅನ್ನು ಭರ್ತಿ ಮಾಡಬಹುದು.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ಸ್ ಇರುವುದಿಲ್ಲ. ಜನನ ಪ್ರಮಾಣ ಪತ್ರದ ಜೊತೆ ಪಾಲಕರ ಆಧಾರ್ ದಾಖಲೆ ನೀಡಬೇಕು. ಮಗು 5 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಆಧಾರ್‌ಗಾಗಿ ಬಯೋ ಮೆಟ್ರಿಕ್ಸ್ ಸೆರೆ ಹಿಡಿಯಲಾಗುತ್ತದೆ. ಮತ್ತೆ 15 ವರ್ಷಕ್ಕೆ ಆಧಾರ್ ನವೀಕರಿಸಬೇಕಾಗುತ್ತದೆ. ಇದು ಸಂಪೂರ್ಣ ಉಚಿತವಾಗಿದೆ.
ಮಗುವಿನ ಜನನ ಪ್ರಮಾಣಪತ್ರ ಅಥವಾ ಮಗುವಿನ ಶಾಲೆಯಲ್ಲಿ ನೀಡಲಾದ ಫೋಟೋ ಐಡಿ (ಈಗಾಗಲೇ ಶಾಲೆಗೆ ಹೋಗುತ್ತಿದ್ದರೆ), ಮಗುವಿನ ಪೋಷಕರ ಆಧಾರ್ ಕಾರ್ಡ್ ವಿವರಗಳು ಮತ್ತು ಮಗುವಿನ ಆಧಾರ್‌ಗೆ ಅರ್ಜಿ ಸಲ್ಲಿಸಲು ಮಗುವಿನ ಪೋಷಕರ ವಿಳಾಸ ಮತ್ತು ಐಡಿ ಪ್ರೂಫ್ ಅಗತ್ಯವಿದೆ.