ಮೈಸೂರು: ತೋಟಗಾರಿಕೆ ಇಲಾಖೆಯ ವತಿಯಿಂದ 2021-22ನೇ ಸಾಲಿನ ತೋಟಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ತೋಗಗಾರಿಕೆ ಮಿಷನ್ ಯೋಜನೆಯಡಿ ಮೈಸೂರು ತಾಲ್ಲೂಕಿಗೆ ಅನ್ವಯವಾಗುವಂತೆ 4 ನಾಲ್ಕು ಹೋಬಳಿಗಳಲ್ಲಿ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 20 ಪಿ.ಟಿ.ಒ ಟ್ರ್ಯಾಕ್ಟರ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 8 ಹೆಚ್.ಪಿ. ಗಿಂತ ಕಡಿಮೆ ಸಾಮಥ್ರ್ಯದ ಟಿಲ್ಲರ್ ಘಟಕಗಳಿಗೆ ಸಹಾಯಧನ ನೀಡಲು ಅವಕಾಶವಿದೆ.
ಆಸಕ್ತ ರೈತರು ವರುಣಾ ಹೋಬಳಿ, ಜಯಪುರ ಹೋಬಳಿ, ಇಲವಾಲ ಹೋಬಳಿ ಹಾಗೂ ಕಸಬಾ ಹೋಬಳಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9742159724 (ವರುಣ), 9686766291 (ಜಯಪುರ), 7026719516 (ಇಲವಾಲ) ಹಾಗೂ 9901387284 ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.