ಮುಂಬೈ: ಸಾಲ ವಸೂಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿನೂತನ ಐಡಿಯಾ ಮಾಡಿಕೊಂಡಿದ್ದು, ಪ್ರಯೋಗ ಯಶಸ್ವಿಯಾಗಿದೆ.
ಬ್ಯಾಂಕ್ ನಿಂದ ಸಾಲ ಪಡೆದುಕೊಂಡು ಇಎಂಐ ಪಾವತಿಸಲು ಹಿಂದೇಟು ಹಾಕುವ ಗ್ರಾಹಕರಿಂದ ಸಾಲ ವಸೂಲಿ ಮಾಡಲು ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಚಾಕೊಲೇಟ್ ಪ್ಯಾಕ್ ಉಡುಗೊರೆ ನೀಡುವ ಮೂಲಕ ಮನವೊಲಿಸಲು ಎಸ್.ಬಿ.ಐ. ಮುಂದಾಗಿದೆ. ಇದಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.
ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಬಡ್ಡಿದರ ಏರಿಕೆಯಾದ ನಂತರ ಇಎಂಐ ಪಾವತಿಸದ ಗ್ರಾಹಕರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಸಾಮಾನ್ಯವಾಗಿ ಇಎಂಐ ಪಾವತಿಸುವಂತೆ ಬ್ಯಾಂಕ್ ನವರು ನೆನಪಿಸುವ ಕರೆಯನ್ನು ಸಾಲ ಪಡೆದ ಗ್ರಾಹಕರು ಸ್ವೀಕರಿಸುವುದಿಲ್ಲ. ಅಂತಹ ಗ್ರಾಹಕರ ಮನವೊಲಿಕೆಗೆ ಚಾಕೊಲೇಟ್ ಪ್ಯಾಕ್ ಹಿಡಿದುಕೊಂಡು ಅಧಿಕಾರಿಗಳು ಹೋಗುತ್ತಿದ್ದಾರೆ. ಚಾಕೊಲೇಟ್ ಕೊಟ್ಟು ಇಎಂಐ ಪಾವತಿಸುವಂತೆ ಗ್ರಾಹಕರಿಗೆ ತಿಳಿಸುತ್ತಿದ್ದು, ಈ ಪ್ರಕ್ರಿಯೆಗೆ ಸಾಲಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.