ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಬ್ಯಾಂಕ್ ಭರ್ಜರಿ ಆಫರ್ ನೀಡ್ತಿದೆ. ಎಸ್ಬಿಐ ಶಾಪಿಂಗ್ ಕಾರ್ನಿವಾಲ್ ಶುರು ಮಾಡಿದೆ. ಶಾಪಿಂಗ್ ಕಾರ್ನಿವಾಲ್ ಏಪ್ರಿಲ್ 7, 2021 ರವರೆಗೆ ನಡೆಯಲಿದೆ.
ಈ ಕಾರ್ನಿವಾಲ್ ನಲ್ಲಿ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಯೋನೊ ಅಪ್ಲಿಕೇಶನ್‌ನಲ್ಲಿ ಆಕರ್ಷಕ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ವರ್ಷದ ಮೂರನೇ ಶಾಪಿಂಗ್ ಕಾರ್ನಿವಾಲ್ ಇದಾಗಿದೆ. ಎರಡು ಕಾರ್ನಿವಾಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ನಂತ್ರ ಮೂರನೇ ಬಾರಿ ಮತ್ತೆ ಕಾರ್ನಿವಾಲ್ ಶುರು ಮಾಡಲಾಗಿದೆ.
ಕಾರ್ನಿವಾಲ್ ಏಪ್ರಿಲ್ 4 ರಿಂದ ಪ್ರಾರಂಭವಾಗಿದೆ. ಹೆಲ್ತ್, ಬಟ್ಟೆ ಶಾಪಿಂಗ್ ಸೇರಿದಂತೆ ಫ್ಲೈಟ್ ಬುಕಿಂಗ್, ಹೋಟೆಲ್ ಬುಕಿಂಗ್ ಗೆ ಗ್ರಾಹಕರು ಶೇಕಡಾ 50ರಷ್ಟು ರಿಯಾಯಿತಿ ಪಡೆಯಬಹುದು. ಅಮೆಜಾನ್ ನಲ್ಲಿ ಹೆಚ್ಚುವರಿಯಾಗಿ ಶೇಕಡಾ 10ರಷ್ಟು ರಿಯಾಯಿತಿ ಸಿಗ್ತಿದೆ. ಓಯೋ ಹೊಟೇಲ್ ಬುಕ್ಕಿಂಗ್ ವೇಳೆ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ.