ಸ್ವಯಂ ನಿವೃತ್ತಿ ಪಡೆಯುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ನೌಕರರಿಗೆ ಭರ್ಜರಿ ಕೊಡುಗೆ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸೆಕೆಂಡ್ ಇನ್ನಿಂಗ್ಸ್-2020 ಎಂಬ ಯೋಜನೆ ಪರಿಚಯಿಸಲು ಹೊರಟಿರುವ ಬ್ಯಾಂಕ್, ಪ್ರಸ್ತಾವಿತ ಯೋಜನೆಯಿಂದ 30 ಸಾವಿರ ನೌಕರರಿಗೆ ಅನುಕೂಲ ಆಗುವ ಅಂದಾಜಿದೆ ಎಂದಿದೆ.
25 ವರ್ಷ ಸೇವೆ ಸಲ್ಲಿಸಿರುವವರು ಅಥವಾ 55 ವರ್ಷ ವಯಸ್ಸು ಆಗಿರುವವರು ಇದಕ್ಕೆ ಅರ್ಹರಾಗಲಿದ್ದು, ಇದು ಐಚ್ಛಿಕವೇ ಹೊರತು ಕಡ್ಡಾಯವಲ್ಲ. ಸೇವಾತೃಪ್ತಿ ಇರುವವರು ಸ್ವಯಂನಿವೃತ್ತಿ ಪಡೆಯಬಹುದು.
ಎಸ್ ಬಿ ಐ ವಿ ಆರ್ ಎಸ್ – 2020 ಯೋಜನೆಯು ಡಿಸೆಂಬರ್ 1 ರಿಂದ ಆರಂಭ ಆಗಲಿದ್ದು, 2021 ರ ಫೆಬ್ರವರಿ ತಿಂಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಮಾತ್ರ ಸ್ವಯಂನಿವೃತ್ತಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಉಳಿದಂತೆ ಗ್ರ್ಯಾಚ್ಯುಟಿ, ಭವಿಷ್ಯನಿಧಿ (ಪಿಎಫ್), ಪಿಂಚಣಿ, ಆರೋಗ್ಯ ಸೇವೆ ಸಹ ಸಿಗಲಿದೆ. ಶೇ.30 ರಷ್ಟು ಮಂದಿ ಸ್ವಯಂನಿವೃತ್ತಿ ಪಡೆದರೂ, ಬ್ಯಾಂಕಿಗೆ ಅಂದಾಜು 2,170 ಕೋಟಿ ರೂ. ಉಳಿತಾಯ ಆಗಲಿದೆ.