ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ತನ್ನ ಚೆಕ್ಗಳಿಗೆ ಸಕಾರಾತ್ಮಕ ವೇತನ ವ್ಯವಸ್ಥೆ ರೂಪಿಸಲು ಸಜ್ಜಾಗಿದೆ. ಹೊಸ ನಿಯಮದ ಪ್ರಕಾರ, 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಪಾವತಿಗೆ ಪ್ರಮುಖ ವಿವರಗಳನ್ನ ಬ್ಯಾಂಕ್ಗೆ ನೀಡುವ ಅಗತ್ಯ ಬೀಳಬಹುದು. ಈ ಹೊಸ ಚೆಕ್ ಪಾವತಿ ನಿಯಮವು ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಚೆಕ್ ನೀಡುವುವರಿಂದ ಹೆಚ್ಚಿನ ವಿವರಗಳನ್ನ ಪಡೆಯುವ ಮೂಲಕ ವ್ಯವಹಾರ ಸುರಕ್ಷತೆಯನ್ನ ಇನ್ನಷ್ಟು ಹೆಚ್ಚಿಸಲಿದ್ದೇವೆ. ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ಚೆಕ್ ಮೊತ್ತ, ಚೆಕ್ ಪಾವತಿಗೆ ಸಂಬಂಧಿಸಿದ ವಿವರಗಳನ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ನೀವು ಹತ್ತಿರದ ಶಾಖೆಯನ್ನ ಭೇಟಿ ಮಾಡಬಹುದಾಗಿದೆ.
ಕೆಲ ತಿಂಗಳ ಹಿಂದೆಯಷ್ಟೇ ರಿಸರ್ವ್ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನ ಪರಿಚಯಿಸಿತ್ತು. ಗ್ರಾಹಕರ ಸುರಕ್ಷೆ ಹಾಗೂ ಮೋಸದ ಜಾಲದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆ ಬ್ಯಾಂಕ್ಗಳಲ್ಲಿ ಜಾರಿಗೆ ಬರಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದರು.
ಭಾರೀ ಮೊತ್ತದ ಚೆಕ್ಗಳನ್ನ ನೀಡುವ ಗ್ರಾಹಕರ ದಾಖಲೆಯನ್ನ ಮತ್ತೊಮ್ಮೆ ಪರಿಶೀಲನೆ ಮಾಡುವ ವ್ಯವಸ್ಥೆಯೇ ಪಾಸಿಟಿವ್ ಪೇ. ಈ ವ್ಯವಸ್ಥೆಯಡಿಯಲ್ಲಿ ಚೆಕ್ ನೀಡುವವರು ಬ್ಯಾಂಕ್ಗೆ ದಿನಾಂಕ, ಚೆಕ್ ಪಾವತಿದಾರರ ವಿವರ, ಸ್ವೀಕರಿಸುವವರ ವಿವರ, ಮೊತ್ತ ಇತ್ಯಾದಿಗಳ ಬಗ್ಗೆ ಕೆಲ ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ.