ವಿಭಿನ್ನವಾಗಿ ಮದುವೆಯಾಗಬೇಕೆನ್ನುವ ಜೋಡಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಕೊಡುಗೆಯನ್ನು ನೀಡ್ತಿದೆ. ಎಸ್ಬಿಐ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡ್ತಿದೆ. ಈ ಸಾಲಕ್ಕೆ ಶೇಕಡಾ 9.60 ರಷ್ಟು ಬಡ್ಡಿಯನ್ನು ಬ್ಯಾಂಕ್ ವಿಧಿಸುತ್ತಿದೆ.
ಗೆಳತಿಯೊಂದಿಗೆ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡ್ತಿದ್ದರೆ ಬಜೆಟ್ ಬಗ್ಗೆ ಆಲೋಚಿಸಬೇಕಾಗಿಲ್ಲ. ಎಸ್ಬಿಐನ ಯೋನೊ ಅಪ್ಲಿಕೇಶನ್ನಿಂದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ದಾಖಲೆ ಸರಿಯಾಗಿದ್ದರೆ, ಎಸ್ಬಿಐನ ಯೋನೊ ಅಪ್ಲಿಕೇಶನ್ನಿಂದ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಮದುವೆಗೆ ಸಾಲ ಸಿಗಲಿದೆ. ನಂತ್ರ ನಿಮಗೆ ಇಷ್ಟವಾದ ಜಾಗದಲ್ಲಿ ನೀವು ಮದುವೆ ಮಾಡಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ರಸಿದ್ಧಿ ಪಡೆಯುತ್ತಿದೆ. ಜೋಡಿ ಸುಂದರ, ಗಮ್ಯ ಪ್ರದೇಶದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸುತ್ತಿದ್ದಾರೆ. ಆದ್ರೆ ಇದಕ್ಕೆ ಹೆಚ್ಚು ಖರ್ಚಾಗುವ ಕಾರಣ ಮಧ್ಯಮ ವರ್ಗದ ಜನರು ಹಿಂದೆ ಸರಿಯುತ್ತಾರೆ. ಬ್ಯಾಂಕ್ ಗಳಲ್ಲಿ ಸುಲಭವಾಗಿ ಸಾಲ ಸಿಗದಿರುವುದು ಕೂಡ ಇದಕ್ಕೆ ಕಾರಣ. ಆದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಸಮಸ್ಯೆಯನ್ನು ಬಗೆಹರಿಸಿದೆ.