ನವದೆಹಲಿ: ಜುಲೈ 10, 11 ರಂದು ಕೆಲ ಸೇವೆಯಲ್ಲಿ ವ್ಯತ್ಯವಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
ಜುಲೈ 10 ರಂದು ರಾತ್ರಿ 10.45 ರಿಂದ ಜುಲೈ 11 ರಂದು ಬೆಳಗ್ಗೆ 12.15 ರವರೆಗೆ ನೆಟ್ ಬ್ಯಾಂಕಿಂಗ್, ಯೋನೋ, ಯುಪಿಐ, ಯೋನೋ ಲೈಟ್ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ಡಿಜಿಟಲ್ ವಹಿವಾಟು ಮಾಡದಂತೆ ತಿಳಿಸಲಾಗಿದೆ. ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಈ ಸೂಚನೆಯನ್ನು ಗಮನಿಸಿ ನಡೆಸುವಂತೆ ಹೇಳಲಾಗಿದೆ.
ಇನ್ನು ಎಸ್ಬಿಐ ನಿಂದ ಪಾಸ್ವರ್ಡ್ ಗಳನ್ನು ನಿಯಮಿತವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ತಿಳಿಸಲಾಗಿದೆ.