ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿ ದರವನ್ನು ಶೇಕಡ 0.50 ರಷ್ಟು ಹೆಚ್ಚಳ ಮಾಡಿದೆ. 50 ಮೂಲಾಂಕಗಳಷ್ಟು ಸಾಲದ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ಸಾಲಗಾರರ ಮಾಸಿಕ ಕಂತಿನಲ್ಲಿಯೂ ಹೆಚ್ಚಳವಾಗಲಿದೆ. ಗ್ರಾಹಕರಿಗೆ ಇಎಂಐ ಹೊರೆ ಹೆಚ್ಚಾಗಲಿದೆ.
ಹಣದುಬ್ಬರ ನಿಯಂತ್ರಣಕ್ಕೆ ಆರ್.ಬಿ.ಐ. ಇತ್ತೀಚೆಗೆ ರೆಪೋ ದರವನ್ನು 0.50 ರಷ್ಟು ಹೆಚ್ಚಳ ಮಾಡಿದ್ದು, ಇದರ ನಂತರ ಎಸ್.ಬಿ.ಐ. ಬಡ್ಡಿ ದರ ಏರಿಕೆ ಮಾಡಿದೆ. ಆಗಸ್ಟ್ 15 ರಿಂದಲೇ ಪರಿಷ್ಕೃತ ಬಡ್ಡಿ ದರಗಳು ಅನ್ವಯವಾಗಲಿವೆ.
ರೆಪೋ ದರಕ್ಕೆ ಜೋಡಣೆಯಾಗಿರುವ ಸಾಲಗಳಿಗೆ ಶೇಕಡ 0.50 ರಷ್ಟು ಬಡ್ಡಿದರ ಹೆಚ್ಚಳವಾಗಲಿದೆ.
ಸಾಂಸ್ಥಿಕ ಬಡ್ಡಿ ದರದಲ್ಲಿ ನೀಡುವ ಸಾಲದ ಮೇಲೆ ಶೇಕಡ 0.20 ಹೆಚ್ಚಳ ಆಗಲಿದೆ.
ಬಿ.ಇ.ಎಲ್.ಆರ್. ಸಾಲದ ಮೇಲಿನ ಬಡ್ಡಿದರ ಶೇಕಡ 8.05 ಕ್ಕೆ ಹೆಚ್ಚಳವಾಗಿದೆ.
ಆರ್.ಎಲ್.ಎಲ್.ಆರ್. ಸಾಲದ ಮೇಲಿನ ಬಡ್ಡಿ ದರ ಶೇಕಡ 7.65 ಕ್ಕೆ ಹೆಚ್ಚಳವಾಗಿದೆ.
ಎಂ.ಸಿ.ಎಲ್.ಆರ್. ಸಾಲದ ಮೇಲಿನ ಬಡ್ಡಿದರ ಶೇಕಡ 7.50 ರಿಂದ ಶೇಕಡ 7.70 ಕ್ಕೆ ಹೆಚ್ಚಳವಾಗಿದೆ.