ಕೊರೊನಾ ಸಂದರ್ಭದಲ್ಲಿ ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಆಲೋಚನೆಯಲ್ಲಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಉತ್ತಮ ಅವಕಾಶವನ್ನು ನೀಡ್ತಿದೆ ಎಸ್‌ಬಿಐ ಸೆಪ್ಟೆಂಬರ್ 30 ರಂದು ಮೆಗಾ ಇ-ಹರಾಜು ನಡೆಸಲಿದೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಸ್ಥಿರ ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ.
ಇದ್ರಲ್ಲಿ ಮನೆ, ಫ್ಲಾಟ್‌ಗಳು, ಅಂಗಡಿಗಳು ಸೇರಿವೆ. ಬ್ಯಾಂಕಿನ ಸಾಲವನ್ನು ಮರುಪಾವತಿಸಲು ವಿಫಲರಾದವರ ಅಡಮಾನ ಆಸ್ತಿ ಇವಾಗಿವೆ ಈಗ ಎಸ್‌ಬಿಐ ತನ್ನ ಬಾಕಿ ಹಣವನ್ನು ವಸೂಲಿ ಮಾಡಲು ಈ ಆಸ್ತಿಗಳನ್ನು ಹರಾಜು ಹಾಕಲಿದೆ.
ಹರಾಜು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಯಲಿದೆ. ಬ್ಯಾಂಕ್ ಪ್ರತಿ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಜನರ ಮುಂದೆ ಇಡಲಿದೆ. ಆಸ್ತಿಯ ಫ್ರೀಹೋಲ್ಡ್ ಅಥವಾ ಗುತ್ತಿಗೆ, ಅದರ ಅಳತೆ, ಸ್ಥಳ ಇತ್ಯಾದಿ ಸೇರಿದಂತೆ ಇತರ ಮಾಹಿತಿಯನ್ನು ನೀಡಲಾಗಿದೆ.
https://www.bankeauctions.com/Sbi, Https://sbi.auctiontiger.net/EPROC/, https://ibapi.in ಮತ್ತು https://www.mstcecommerce.com/auctionhome/ibapi/index.jsp ನಲ್ಲಿ ಎಲ್ಲ ಮಾಹಿತಿ ಲಭ್ಯವಿದೆ. ಇ-ಹರಾಜು ದಿನಾಂಕದಂದು ನಿಗದಿತ ಸಮಯದಲ್ಲಿ ಲಾಗಿನ್ ಮಾಡುವವರಿಗೆ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಮೊದಲು ಬ್ಯಾಂಕ್ ಕೇಳುವ ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಇವೆಲ್ಲವೂ ಮೇಲಿನ ಲಿಂಕ್ ನಲ್ಲಿ ಲಭ್ಯವಿದೆ.