ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಂಸಿಎಲ್ಆರ್ ಅವಧಿ ಇಳಿಕೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಾಹನ, ಗೃಹ ಅಥವಾ ರಿಟೇಲ್ ಸಾಲವನ್ನು ಪಡೆದ ಗ್ರಾಹಕರಿಗೆ ಅನುಕೂಲವಾಗಲಿದೆ.
ಎಂಸಿಎಲ್ಆರ್ ರೀಸೆಟ್ ಮಾಡುವ ಅವಧಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ವರ್ಷದಿಂದ ಆರು ತಿಂಗಳಿಗೆ ಇಳಿಕೆ ಮಾಡಿದ್ದು ಸಾಲ ಪಡೆದ ಗ್ರಾಹಕರು ಬಡ್ಡಿ ಇಳಿಕೆ ಲಾಭವನ್ನು ಶೀಘ್ರವಾಗಿ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.