ನವದೆಹಲಿ: ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವಲ್ಲಿ ಪ್ರವೇಶ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಇಂದು ಎಸ್‌ಬಿಐ ಮೊಬೈಲ್ ಹ್ಯಾಂಡ್‌ಹೆಲ್ಡ್ ಸಾಧನ ಪ್ರಾರಂಭಿಸಿದೆ.
ಗ್ರಾಹಕರಿಗೆ ಬ್ಯಾಂಕಿಂಗ್ ಅನುಕೂಲತೆ ಹೆಚ್ಚಿಸಲು ಮೊಬೈಲ್ ಹ್ಯಾಂಡ್ ಹೆಲ್ಡ್ ಸಾಧನ ಬಿಡುಗಡೆ ಮಾಡಿದೆ. ಈ ಸಾಧನ ಗ್ರಾಹಕರ ಮನೆ ಬಾಗಿಲಿಗೆ ನಗದು ಹಿಂಪಡೆಯುವಿಕೆ, ನಗದು ಠೇವಣಿ, ನಿಧಿ ವರ್ಗಾವಣೆ, ಬ್ಯಾಲೆನ್ಸ್ ವಿಚಾರಣೆ ಮತ್ತು ಮಿನಿ ಸ್ಟೇಟ್‌ಮೆಂಟ್ ಅನ್ನು ಒದಗಿಸುತ್ತದೆ.
ಆರೋಗ್ಯ ಸಮಸ್ಯೆಗಳಿಂದಾಗಿ ಬ್ಯಾಂಕ್ ಶಾಖೆ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಪ್ರವೇಶಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಈ ಉಪಕ್ರಮವು ವಿಶೇಷವಾಗಿ ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ದಾಖಲಾತಿಗಳು, ಖಾತೆ ತೆರೆಯುವಿಕೆ, ಹಣ ರವಾನೆ ಮತ್ತು ಕಾರ್ಡ್ ಆಧಾರಿತ ಸೇವೆಗಳಂತಹ ಸೇವೆಗಳನ್ನು ಸೇರಿಸುವ ಮೂಲಕ ಬ್ಯಾಂಕ್ ತನ್ನ ಕೊಡುಗೆಗಳನ್ನು ವಿಸ್ತರಿಸಲು ಯೋಜಿಸಿದೆ.