ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ತನ್ನ ಲಕ್ಷಾಂತರ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ರವಾನೆ ಮಾಡಿದೆ. ಕೆವೈಸಿ ನವೀಕರಿಸುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಿದೆ. ಮೇ 31 ರೊಳಗೆ ಕೆವೈಸಿ ನವೀಕರಣ ಮಾಡುವಂತೆ ಬ್ಯಾಂಕ್ ಹೇಳಿದೆ.
ಮೇ 31ರೊಳಗೆ ಕೆವೈಸಿ ಮಾಡದೆ ಹೋದಲ್ಲಿ ಬ್ಯಾಂಕಿಂಗ್ ಸೇವೆ ಬಂದ್ ಮಾಡುವುದಾಗಿ ಬ್ಯಾಂಕ್ ಹೇಳಿದೆ. ಟ್ವೀಟರ್ ಮೂಲಕ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ. ಗ್ರಾಹಕರು ತಮ್ಮ ಕೆವೈಸಿ ದಾಖಲೆಗಳನ್ನು ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು ಎಂದು ಬ್ಯಾಂಕ್ ಟ್ವಿಟ್ಟರ್ ನಲ್ಲಿ ಸೂಚಿಸಿದೆ.
ATM ನಲ್ಲಿದ್ದ ಸ್ಯಾನಿಟೈಸರ್ ನ್ನು ಬಿಡಲಿಲ್ಲ ಭೂಪ….!
ಕೊರೊನಾ ಕಾರಣದಿಂದಾಗಿ ಬ್ಯಾಂಕ್ ಈ ಸೌಲಭ್ಯವನ್ನು ಮೇ 31 ರವರೆಗೆ ವಿಸ್ತರಿಸಿದೆ. ಮೇ 31 ರವರೆಗೆ ಕೆವೈಸಿ ನವೀಕರಿಸದ ಖಾತೆದಾರರ ಖಾತೆ ಸ್ಥಗಿತಗೊಳ್ಳಲಿದೆ. ಕೊರೊನಾ ಹೆಚ್ಚುತ್ತಿರುವ ಕಾರಣದಿಂದಾಗಿ ಎಸ್ಬಿಐ ಗ್ರಾಹಕರು ತಮ್ಮ ದಾಖಲೆಗಳನ್ನು ಬ್ಯಾಂಕ್ಗೆ ಪೋಸ್ಟ್ ಅಥವಾ ಇಮೇಲ್ ಮೂಲಕ ಕಳುಹಿಸುವ ಮೂಲಕ ಕೆವೈಸಿಯನ್ನು ನವೀಕರಿಸಬಹುದು.