ನವದೆಹಲಿ: ಜನ್ ಧನ್ ಖಾತೆದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸಿಹಿಸುದ್ದಿ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಜನ್ ಧನ್ ಕಾರ್ಡ್ ಗೆ ಅರ್ಜಿ ಹಾಕಿದ ಗ್ರಾಹಕರಿಗೆ ಎರಡು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿದೆ.
ಎಸ್.ಬಿ.ಐ. ರುಪೇ ಜನ್ ಧನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಜನ್ ಧನ್ ಖಾತೆ ಹೊಂದಿದ್ದ ಗ್ರಾಹಕರಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ, ಸರ್ಕಾರದ ಯೋಜನೆಗಳ ಲಾಭ ನೇರ ವರ್ಗಾವಣೆ, ಆಕಸ್ಮಿಕ ವಿಮೆ 2 ಲಕ್ಷ ರೂ., ಲೈಫ್ ಕವರ್ 30,000 ರೂ. ಸಿಗಲಿದೆ.
ಅಲ್ಲದೇ ಈ ಖಾತೆಯ ಮೂಲಕ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಶ್ರಮ ಯೋಗಿ ಮಾನ್ ಧನ್ ಯೋಜನೆ ಪಿಂಚಣಿ ಖಾತೆಗಳನ್ನು ಕೂಡ ತೆರೆಯಬಹುದು.