ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಸಂಪರ್ಕ ರಹಿತ ರೂಪೇ ಡೆಬಿಟ್ ಕಾರ್ಡ್ನ್ನು ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಿದೆ.
ದೇಶಾದ್ಯಂತ ಪ್ರಾರಂಭಿಸಲಾದ ಈ ಕಾರ್ಡ್ನ್ನ ಇಂಡಿಯನ್ ಆಯಿಲ್ ಕೇಂದ್ರದಲ್ಲಿ ಪ್ರತಿ ಬಾರಿ ಬಳಕೆ ಮಾಡಿದಾಗಲೂ ಪ್ರತಿ 200 ರೂಪಾಯಿಗೆ 6 ಪಟ್ಟು ಬಹುಮಾನ ಅಂಕ ಹಾಗೂ ಇಂಧನ ಖರೀದಿಗೆ 0.75 ಪ್ರತಿಶತ ಲಾಯಲಿಟಿ ಪಾಯಿಂಟ್ ಸಿಗಲಿದೆ.
ಗ್ರಾಹಕರು ಹೋಟೆಲ್, ಚಲನಚಿತ್ರ, ದಿನಸಿ ಸೇರಿದಂತೆ ವಿವಿಧ ಬಿಲ್ಗಳಿಗಾಗಿ ಪ್ರತಿಫಲ ಅಂಕಗಳನ್ನ ಗಳಿಸಬಹುದಾಗಿದೆ. ಇಂಧನ ಖರೀದಿಗಂತೂ ಯಾವುದೇ ಮಿತಿಯಿಲ್ಲದೇ ದೇಶಾದ್ಯಂತ ಈ ಕಾರ್ಡ್ನ್ನ ಬಳಕೆ ಮಾಡಬಹುದಾಗಿದೆ. ಎಸ್ಬಿಐ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಸಂಪರ್ಕ ರಹಿತ ರೂಪೇ ಡೆಬಿಟ್ ಕಾರ್ಡ್ನ್ನ ಹೊಂದಬಹುದಾಗಿದೆ.
ಸಂಪರ್ಕರಹಿತ ಕಾರ್ಡ್ನಲ್ಲಿ ಒಂದೇ ಟ್ಯಾಪ್ನಲ್ಲಿ 5000 ರೂಪಾಯಿವರೆಗೆ ವಹಿವಾಟು ಮಾಡಬಹುದಾಗಿದೆ. ಈ ಕಾರ್ಡ್ ನಲ್ಲಿ ಆಕರ್ಷಕ ಆಫರ್ಗಳನ್ನ ನೀಡೋದಾಗಿ ಬ್ಯಾಂಕ್ ಹೇಳಿದೆ.