ನವದೆಹಲಿ: ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಆರ್.ಡಿ. ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ. ಜನವರಿ 15 ರಿಂದಲೇ ಅನ್ವಯವಾಗುವಂತೆ ನೂತನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ.
ಒಂದರಿಂದ ಎರಡು ವರ್ಷ, ಒಂದರಿಂದ ಮೂರು ವರ್ಷದ ಠೇವಣಿಗೆ ಶೇಕಡ 5.1 ರಷ್ಟು ಬಡ್ಡಿದರ ನೀಡಲಾಗುತ್ತದೆ.
ಮೂರರಿಂದ ಐದು ವರ್ಷದ ಠೇವಣಿಗೆ ಶೇಕಡ 5.3 ರಷ್ಟು ಬಡ್ಡಿದರ ನೀಡಲಿದ್ದು, ಐದರಿಂದ ಹತ್ತು ವರ್ಷದ ಠೇವಣಿಗೆ ಶೇಕಡ 5.4 ರಷ್ಟು ಬಡ್ಡಿ ದರ ನೀಡಲಾಗುವುದು. ಮಾಸಿಕ ಉಳಿತಾಯ ಯೋಜನೆಯಾಗಿರುವ ಆರ್.ಡಿ.ಯಲ್ಲಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಕೂಡ ಠೇವಣಿ ಇಡಬಹುದಾಗಿದೆ.