ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ.
ಸಾಮಾನ್ಯ ಗೃಹ ಸಾಲ, ಸರ್ಕಾರೀ ನೌಕರರಿಗೆ ಗೃಹ ಸಾಲ, ಸೇನೆಯ ಸಿಬ್ಬಂದಿಗೆ ಶೌರ್ಯ ಗೃಹ ಸಾಲ, ಚಾಲ್ತಿ ಗ್ರಾಹಕರಿಗೆ ಟಾಪ್-ಅಪ್ ಸಾಲ, ಮ್ಯಾಕ್ಸಿಗೇನ್, ಸ್ಮಾರ್ಟ್ ಹೌಸ್, ಫ್ಲೆಕ್ಸಿಪೇ ಹಾಗೂ ಮಹಿಳೆಯರಿಗೆ ಹರ್‌ಘರ್ ಯೋಜನೆಗಳ ಮೂಲಕ ಸಾಲ ಕೊಡುವ ವ್ಯವಸ್ಥೆಯನ್ನು ಎಸ್‌ಬಿಐ ಇಟ್ಟುಕೊಂಡಿದೆ.
ಅಂಚೆ ಕಚೇರಿ ಗ್ರಾಹಕರಿಗೆ ಮತ್ತೊಂದು ಶಾಕ್: ಹಣದ ವ್ಯವಹಾರಕ್ಕೆ ವಿಧಿಸಲಾಗುತ್ತೆ ಹೆಚ್ಚುವರಿ ಶುಲ್ಕ..!
ಗೃಹ ಸಾಲದ ವಿಭಾಗದಲ್ಲಿ 34% ಪಾಲು ಹೊಂದಿರುವ ಎಸ್‌ಬಿಐ, ಇತ್ತೀಚೆಗೆ ತನ್ನ ಗೃಹ ಸಾಲದ ಬ್ಯುಸಿನೆಸ್‌ನಲ್ಲಿ 5 ಲಕ್ಷ ಕೋಟಿ ರೂ.ಗಳ ಮಟ್ಟ ದಾಟಿದೆ. 2024ರ ವಿತ್ತೀಯ ವರ್ಷದ ವೇಳೆಗೆ ತನ್ನ ಗೃಹ ಸಾಲದ ವಹಿವಾಟನ್ನು ಏಳು ಲಕ್ಷ ಕೋಟಿ ರೂ.ಗಳಿಗೆ ವರ್ಧಿಸಿಕೊಳ್ಳಲು ಎಸ್‌ಬಿಐ ಚಿಂತನೆ ನಡೆಸಿದೆ.
ಪ್ರಧಾನ ಮಂತ್ರಿಯವರ ’2022ರ ವೇಳೆಗೆ ಸರ್ವರಿಗೂ ಸೂರು’ ಯೋಜನೆಗೆ ಪೂರಕವಾಗಿ ಎಸ್‌ಬಿಐ ನಿರಂತರವಾಗಿ ಗೃಹ ಸಾಲಗಳನ್ನು ಕೊಡುತ್ತಿದ್ದು, ಡಿಸೆಂಬರ್ ವೇಳೆಗೆ 1,94,582 ಗೃಹ ಸಾಲಗಳನ್ನು ಮಂಜೂರು ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.