ನವದೆಹಲಿ: ಗೃಹ ಸಾಲದ ಬಡ್ಡಿ ದರವನ್ನು ಶೇಕಡ 0.3 ರಷ್ಟು ಇಳಿಕೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹಸಾಲದ ಬಡ್ಡಿದರದಲ್ಲಿ ಶೇಕಡ 0.3 ರಷ್ಟು ಕಡಿತ ಮಾಡಿದ್ದು, ಇದರೊಂದಿಗೆ 30 ಲಕ್ಷ ರೂಪಾಯಿವರೆಗಿನ ಗೃಹಸಾಲದ ಬಡ್ಡಿದರ ಶೇಕಡ 6.80 ಕ್ಕೆ ಇಳಿಕೆಯಾಗಿದೆ.
30 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಗೃಹ ಸಾಲಕ್ಕೆ ಶೇಕಡ 6.95 ರಷ್ಟು ಬಡ್ಡಿ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದ ಮಹಿಳೆಯರಿಗೆ ಗೃಹಸಾಲದ ಬಡ್ಡಿದರದಲ್ಲಿ ಶೇಕಡ 0.05 ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲಾಗುವುದು.
ಅದೇ ರೀತಿ, ಡಿಜಿಟಲ್ ಮೂಲದ ಗೃಹಸಾಲಕ್ಕೆ ಶೇಕಡ 0.05 ರಷ್ಟು, ಬ್ಯಾಲೆನ್ಸ್ ಟ್ರಾನ್ಸ್ಫರ್ ಗೆ ಶೇಕಡ 0.05 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಬ್ಯಾಂಕ್ ಸಂಸ್ಕರಣಾ ಶುಲ್ಕ ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ಹೇಳಲಾಗಿದೆ.