ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐನಿಂದ ಗೃಹ ಸಾಲ ಪಡೆದವರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಎಸ್ಬಿಐ ಹೆಚ್ಚಿಸಿದೆ. ಎಸ್ಬಿಐ ಶೇಕಡಾ 0.25ರಷ್ಟು ಬಡ್ಡಿ ಹೆಚ್ಚಳ ಮಾಡಿದೆ. ಹೊಸ ದರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ ಎಂದು ಎಸ್ಬಿಐ ಹೇಳಿದೆ.
ಈ ಹಿಂದೆ ಶೇಕಡಾ 6.7 ಇದ್ದ ಗೃಹ ಸಾಲದ ಮೇಲಿನ ಬಡ್ಡಿ ಈಗ ಶೇಕಡಾ 6.9 ಆಗಿದೆ. ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಗೃಹ ಸಾಲವು, ಇಬಿಎಲ್‌ಆರ್ ಗಿಂತ ಶೇಕಡಾ 0.40ರಷ್ಟು ಹೆಚ್ಚಿದೆ. ಬ್ಯಾಂಕಿನ ಇಬಿಎಲ್‌ಆರ್ ಪ್ರಸ್ತುತ ಶೇಕಡಾ 6.65ರಷ್ಟಿದೆ. ಗೃಹ ಸಾಲವು ಶೇಕಡಾ 7 ರಷ್ಟಿದೆ. ಆದ್ರೆ ಮಹಿಳೆಯರಿಗೆ ಶೇಕಡಾ 0.05ರಷ್ಟು ರಿಯಾಯಿತಿಯಲ್ಲಿ ಸಾಲ ಸಿಗುತ್ತದೆ. ಅಂದ್ರೆ ಗೃಹ ಸಾಲದ ಬಡ್ಡಿ ದರ ಶೇಕಡಾ 6.95ರಷ್ಟಾಗುತ್ತದೆ.
ಕಳೆದ ತಿಂಗಳು ಎಸ್‌ಬಿಐ ಮಾರ್ಚ್ 31 ರವರೆಗೆ ಗೃಹ ಸಾಲ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿತ್ತು. ಈ ಅವಧಿಯಲ್ಲಿ ಬ್ಯಾಂಕ್ 75 ಲಕ್ಷದವರೆಗಿನ ಸಾಲಗಳಿಗೆ ಶೇಕಡಾ 6.70ರಷ್ಟು ಮತ್ತು 75 ಲಕ್ಷದಿಂದ 5 ಕೋಟಿವರೆಗಿನ ಸಾಲಗಳಿಗೆ ಶೇಕಡಾ 6.75ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.