ಕೊರೊನಾ ಮಧ್ಯೆಯೇ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹಿರಿಯ ನಾಗರಿಕರಿಗಾಗಿ ಜಾರಿಯಲ್ಲಿರುವ ವಿಶೇಷ ಸ್ಥಿರ ಠೇವಣಿ ಯೋಜನೆಯ ಗಡುವನ್ನು ಬ್ಯಾಂಕುಗಳು ಮತ್ತೊಮ್ಮೆ ವಿಸ್ತರಿಸಿವೆ. ಹಿರಿಯ ನಾಗರಿಕರು ಜೂನ್ ವರೆಗೆ ಹೆಚ್ಚಿನ ಬಡ್ಡಿ ದರಗಳ ಲಾಭವನ್ನು ಪಡೆಯಬಹುದು.
ಕಳೆದ ವರ್ಷ ಮೇನಲ್ಲಿ ಬ್ಯಾಂಕ್ ಈ ವಿಶೇಷ ಕೊಡುಗೆ ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗಾಗಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಿಶೇಷ ಎಫ್‌ಡಿ ಯೋಜನೆಗಳನ್ನು ನೀಡ್ತಿದೆ.
ಈ ವಿಶೇಷ ಎಫ್‌ಡಿ ಯೋಜನೆಗಳ ಅವಧಿಯನ್ನು ಬ್ಯಾಂಕುಗಳು ಮಾರ್ಚ್20, 2021 ರಿಂದ ಜೂನ್ 30, 2021 ರವರೆಗೆ ವಿಸ್ತರಿಸಿದೆ. ಸಾಮಾನ್ಯ ಗ್ರಾಹಕರಿಗಿಂತ ಶೇಕಡಾ 1 ರಷ್ಟು ಹೆಚ್ಚಿನ ಬಡ್ಡಿ ಹಿರಿಯ ನಾಗರಿಕರಿಗೆ ಸಿಗ್ತಿದೆ. ಎಸ್‌ಬಿಐನಲ್ಲಿ ಐದು ವರ್ಷಗಳ ಅವಧಿಗೆ ಶೇಕಡಾ 5.4 ರಷ್ಟು ಬಡ್ಡಿ ಸಿಗ್ತಿದೆ. ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಡಿ ಎಫ್‌ಡಿ ತೆಗೆದುಕೊಂಡರೆ ಅವರಿಗೆ ಶೇಕಡಾ 6.20 ರಷ್ಟು ಬಡ್ಡಿ ಸಿಗುತ್ತದೆ.