ನವದೆಹಲಿ: ಹಬ್ಬದ ಸೀಸನ್ ನನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ವಿವಿಧ ಕೊಡುಗೆ ಘೋಷಿಸಲಾಗಿದೆ. ಆಕರ್ಷಕ ಬಡ್ಡಿದರದಲ್ಲಿ ಕಾರ್ ಲೋನ್, ಗೋಲ್ಡ್ ಲೋನ್ ಮತ್ತು ವೈಯಕ್ತಿಕ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಎಸ್ಬಿಐ ಯೋನೋ ಮೂಲಕ ಸಂಸ್ಕರಣಾ ಶುಲ್ಕ ಮನ್ನಾ ಮಾಡಲಾಗಿದೆ.
ಗ್ರಾಹಕರಿಗೆ ಲಾಭದಾಯಕ ಶಾಪಿಂಗ್ ಅನುಭವ ಕಲ್ಪಿಸಲು ಹಬ್ಬದ ಸೀಸನ್ ನಲ್ಲಿ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಆಫರ್ ನೀಡಲಿದೆ. ನವೆಂಬರ್ 30ರ ವರೆಗೆ ಈ ಸೌಲಭ್ಯ ಸಿಗಲಿದೆ. ಎಸ್ಬಿಐ ಕಾರ್ಡ್ ಹೊಂದಿರುವ ಗ್ರಾಹಕರು ದೇಶಾದ್ಯಂತ 1.3 ಲಕ್ಷ ಮಳಿಗೆಗಳಲ್ಲಿ ಇಎಂಐ ಖರೀದಿ ಸೌಲಭ್ಯ ಪಡೆಯಬಹುದು.
ಮೊಬೈಲ್, ಎಲೆಕ್ಟ್ರಾನಿಕ್ಸ್ ಜೊತೆಗೆ ಅನೇಕ ವಸ್ತುಗಳ ಮೇಲೆ ಹೆಚ್ಚುವರಿ ವೆಚ್ಚವಿಲ್ಲದೆ ಇಎಂಐ ಸೌಲಭ್ಯದೊಂದಿಗೆ ಗ್ರಾಹಕರಿಗೆ ಕೊಡುಗೆ ನೀಡಲಾಗಿದೆ. 1500ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕ್ಯಾಶ್ ಬ್ಯಾಕ್ ಆಫರ್, ಡಿಸ್ಕೌಂಟ್ ಮೂಲಕ ಗ್ರಾಹಕರು ಹೆಚ್ಚಿನ ಉಳಿತಾಯ ಪಡೆಯಬಹುದಾಗಿದೆ ಎಂದು ಎಸ್ಬಿಐ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಅಶ್ವಿನಿಕುಮಾರ್ ತಿವಾರಿ ಹೇಳಿದ್ದಾರೆ.