1800 112 211 ಸಂಖ್ಯೆಗೆ ಕರೆ ಮಾಡಿ
ಎಸ್ಬಿಐ ಕಾರ್ಡ್ ಬ್ಲಾಕ್ ಮಾಡಲು 2ನ್ನು ಒತ್ತಿ
ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 5 ಸಂಖ್ಯೆಯನ್ನ ನಮೂದಿಸಿ
ಕಾರ್ಡ್ ಬ್ಲಾಕ್ ಆಗಿರೋದ್ರ ಬಗ್ಗೆ ಎಸ್ಎಂಎಸ್ ಮೂಲಕ ಎಸ್ಬಿಐ ಮಾಹಿತಿ ನೀಡಲಿದೆ.
ಹೊಸ ಡೆಬಿಟ್ ಕಾರ್ಡ್ ಪಡೆಯಲು ಈ ಮಾರ್ಗಗಳನ್ನ ಬಳಸಿ:
ವೆಬ್ಸೈಟ್: sbicard.com ಗೆ ಲಾಗಿನ್ ಆಗಿ ನೀವು ಹೊಸ ಕಾರ್ಡ್ಗೆ ಮನವಿ ಸಲ್ಲಿಸಬಹುದಾಗಿದೆ. ರಿಕ್ವೆಸ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಿಕ ರಿ ಇಶ್ಯೂ / ರಿಪ್ಲೇಸ್ ಕಾರ್ಡ್ ಸೆಲೆಕ್ಟ್ ಮಾಡಿ. ಕಾರ್ಡ್ ನಂಬರ್ನ್ನು ಆಯ್ಕೆ ಮಾಡಿ ಸಬ್ಮಿಟ್ ಕೊಡಿ.
ಮೊಬೈಲ್ ಅಪ್ಲಿಕೇಶನ್: ಎಸ್ಬಿಐ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಲಾಗಿನ್ ಆಗಿ ಮೆನು ಟ್ಯಾಬ್ನಲ್ಲಿ ಸರ್ವೀಸ್ ರಿಕ್ವೆಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ರಿ ಇಶ್ಯೂ / ರಿಪ್ಲೇಸ್ ಕಾರ್ಡ್ ಆಯ್ಕೆ ಮಾಡಿ. ಕಾರ್ಡ್ ನಂಬರ್ ಆಯ್ಕೆ ಮಾಡಿ ಸಬ್ಮಿಟ್ ಕೊಡಿ.
ಇ ಮೇಲ್ : sbicard.com/email ಗೆ ಅಧಿಕೃತ ಮೇಲ್ ಬರೆಯಬಹುದು.
ಸಹಾಯವಾಣಿ :1800 425 3800 ಸಂಖ್ಯೆಗೆ ಕರೆ ಮಾಡಿ.
ಹೊಸ ಕಾರ್ಡ್ಗಾಗಿ ನೀವು 100 ರೂಪಾಯಿ ಹಾಗೂ ಕೆಲ ತೆರಿಗೆ ಮೊತ್ತವನ್ನ ಪಾವತಿ ಮಾಡಬೇಕು. ಹೊಸ ಕಾರ್ಡ್ಗೆ ವಿನಂತಿ ಸಲ್ಲಿಸಿದ 7 ದಿನಗಳಲ್ಲಿ ನಿಮ್ಮ ಕೈ ಸೇರಲಿದೆ.