alex Certify SBI ಗ್ರಾಹಕರಿಗೆ ಗುಡ್ ನ್ಯೂಸ್: WhatsApp ಬ್ಯಾಂಕಿಂಗ್ ಶೀಘ್ರದಲ್ಲೇ ಬಳಕೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಗುಡ್ ನ್ಯೂಸ್: WhatsApp ಬ್ಯಾಂಕಿಂಗ್ ಶೀಘ್ರದಲ್ಲೇ ಬಳಕೆಗೆ

ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸಂಪರ್ಕಗಳಿಗೆ ಆನ್‌ ಲೈನ್ ವಹಿವಾಟುಗಳನ್ನು ಮಾಡಲು WhatsApp ಪಾವತಿಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಸಂದೇಶ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಬಳಸಲಿದ್ದಾರೆ.

SBI ತನ್ನ ಗ್ರಾಹಕರಿಗೆ WhatsApp ಆಧಾರಿತ ಬ್ಯಾಂಕಿಂಗ್ ಅನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದೆ. ಎಸ್‌.ಬಿ.ಐ. ಅಧ್ಯಕ್ಷ ದಿನೇಶ್ ಖಾರಾ ಅವರು ಈ ಘೋಷಣೆ ಮಾಡಿ, ಅಗ್ರಿಗೇಟರ್‌ ಗಳು ಮತ್ತು ಕಾರ್ಪೊರೇಟ್ ಕ್ಲೈಂಟ್‌ ಗಳಿಗೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(API) ಬ್ಯಾಂಕಿಂಗ್ ಅನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

API ಬ್ಯಾಂಕಿಂಗ್ ಎನ್ನುವುದು ಬ್ಯಾಂಕ್ ಮತ್ತು ಕ್ಲೈಂಟ್ ಸರ್ವರ್‌ಗಳ ನಡುವಿನ ಸಂವಹನವನ್ನು ಸುಧಾರಿಸಲು API ಗಳನ್ನು(ಎರಡು ಅಥವಾ ಹೆಚ್ಚಿನ ಕಂಪ್ಯೂಟರ್ ಪ್ರೋಗ್ರಾಂಗಳು ಪರಸ್ಪರ ಸಂವಹನ ನಡೆಸಲು ಒಂದು ಮಾರ್ಗ) ಬಳಸುವ ಒಂದು ವ್ಯವಸ್ಥೆಯಾಗಿದೆ. ವ್ಯವಸ್ಥೆಯು ಸುಗಮ ಡೇಟಾ ವರ್ಗಾವಣೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ಗ್ರಾಹಕರು ಮತ್ತು ಬ್ಯಾಂಕಿನ ವ್ಯವಸ್ಥೆಗಳ ನಡುವೆ ಸುರಕ್ಷಿತ ಏಕೀಕರಣ ಉತ್ತೇಜಿಸುತ್ತದೆ.

SBI ಒಮ್ಮೆ WhatsApp ಬ್ಯಾಂಕಿಂಗ್ ಅನ್ನು ಪರಿಚಯಿಸಿದರೆ, ಬ್ಯಾಂಕ್ ಗ್ರಾಹಕರು ವಿವಿಧ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಸಾಮಾಜಿಕ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.

SBI ಕ್ರೆಡಿಟ್ ಕಾರ್ಡ್ ಗ್ರಾಹಕರು ಇನ್ನೂ ಕೆಲವು ಬ್ಯಾಂಕಿಂಗ್ ವಹಿವಾಟುಗಳಿಗಾಗಿ WhatsApp ಬಳಸಬಹುದು. ಇವುಗಳಲ್ಲಿ ಬಾಕಿ ಉಳಿದಿರುವ ಖಾತೆ ಬ್ಯಾಲೆನ್ಸ್, ರಿವಾರ್ಡ್ ಪಾಯಿಂಟ್‌ ಗಳು, ಖಾತೆ ಸಾರಾಂಶ, ಕಾರ್ಡ್ ಪಾವತಿಗಳನ್ನು ಪರಿಶೀಲಿಸುವುದು ಸೇರಿದೆ.

WhatsApp ಸಂಪರ್ಕ ಹೇಗೆ ಸೈನ್ ಅಪ್ ಮಾಡಬಹುದು…?

Whatsapp ಸಂಪರ್ಕಕ್ಕಾಗಿ ಸೈನ್ ಅಪ್ ಮಾಡಲು, 9004022022 ಗೆ ‘OPTIN’ ಎಂದು ಸಂದೇಶ ಕಳುಹಿಸಬೇಕು.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು 08080945040 ಗೆ ಮಿಸ್ಡ್ ಕಾಲ್ ಅನ್ನು ಸಹ ನೀಡಬಹುದು.

ನೀವು SBI ಕಾರ್ಡ್ ಮೊಬೈಲ್ ಅಪ್ಲಿಕೇಶನ್‌ ಗೆ ಲಾಗಿನ್ ಮಾಡಬಹುದು ಮತ್ತು WhatsApp ಗೆ ಚಂದಾದಾರರಾಗಲು ‘WhatsApp ಸಂಪರ್ಕ’ ಕ್ಲಿಕ್ ಮಾಡಿ.

5676791 ಗೆ ‘WAOPTIN XXXX’ ಎಂದು ಪಠ್ಯ ಸಂದೇಶ ಕಳುಹಿಸಿ. ‘XXXX’ ಎಂಬುದು ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಸೂಚಿಸುತ್ತದೆ.

ICICI, HDFC ಮತ್ತು Axis ಸೇರಿದಂತೆ ಹಲವು ಬ್ಯಾಂಕ್‌ ಗಳು ಒಂದಲ್ಲ ಒಂದು ರೀತಿಯಲ್ಲಿ WhatsApp ಆಧಾರಿತ ಸೇವೆಗಳನ್ನು ನೀಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...