![](https://kannadadunia.com/wp-content/uploads/2021/02/77912-sbi-pti.jpeg)
ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ತಮ್ಮ ಗ್ರೀನ್ ಪಿನ್ ಅನ್ನು ಜನರೇಟ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಯಾವೆಲ್ಲ ಹಂತಗಳನ್ನ ಅನುಸರಿಸಬೇಕು ಅನ್ನೋದ್ರ ಬಗ್ಗೆ ತಿಳಿದುಕೊಳ್ಳಲು ನಮ್ಮ ಸಹಾಯವಾಣಿ ಸಂಖ್ಯೆ 1800 112 211 ಅಥವಾ 1800 425 3800ಗೆ ಕರೆ ಮಾಡಿ ಎಂದು ಎಸ್.ಬಿ.ಐ. ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ನೀವು ಎಸ್ಬಿಐ ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ಗಳ ಪಿನ್ನ್ನು ಜನರೇಟ್ ಮಾಡಲು ಈ ಮೇಲೆ ತಿಳಿಸಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.
ಪಿನ್ ಜನರೇಟ್ ಮಾಡಲಿಕ್ಕಾಗಿ 6ನ್ನು ಒತ್ತಿರಿ.
ಇದಾದ ಬಳಿಕ 16 ಸಂಖ್ಯೆ ಎಸ್ಬಿಐ ಕಾರ್ಡ್ ನಂಬರ್, ಜನ್ಮ ದಿನಾಂಕ ಹಾಗೂ ಕಾರ್ಡ್ನ ಅವಧಿ ಮುಗಿಯುವ ಸಮಯವನ್ನ ನೋಂದಾಯಿಸಿರಿ.
ಈಗ ನಿಮ್ಮ ಮೊಬೈಲ್ ನಂಬರ್ಗೆ ಬರುವ 6 ಸಂಖ್ಯೆಯ ಒಟಿಪಿಯನ್ನ ನೋಂದಾಯಿಸಿ. ನಿಮಗೆ ಬೇಕಾದ 4 ಸಂಖ್ಯೆಗಳನ್ನ ನೋಂದಾಯಿಸುವ ಮೂಲಕ ಎಟಿಎಂ ಪಿನ್ನ್ನು ಸೆಟ್ ಮಾಡಿ. ಇದಾದ ಬಳಿಕ ಅದೇ ಸಂಖ್ಯೆಯನ್ನ ಇನ್ನೊಮ್ಮೆ ನೋಂದಾಯಿಸಿ.