ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಡಿಜಿಟಲ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಮೇ 7 ರಂದು ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಗಳ ಉನ್ನತೀಕರಣದ ಕಾರಣ ಡಿಜಿಟಲ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ದೇಶಾದ್ಯಂತ ಸುಮಾರು 22,000 ಕ್ಕೂ ಹೆಚ್ಚು ಶಾಖೆಗಳನ್ನು ಮತ್ತು 57,889 ಕ್ಕೂ ಹೆಚ್ಚು ಎಟಿಎಂಗಳೊಂದಿಗೆ ಅತಿ ದೊಡ್ಡ ನೆಟ್ವರ್ಕ್ ಬಂದಿರುವ ಎಸ್ಬಿಐ ಗ್ರಾಹಕರಿಗೆ ಮುಖ್ಯವಾದ ಎಚ್ಚರಿಕೆ ಸಂದೇಶ ನೀಡಿದೆ.
ಮೇ 7 ರಂದು 22.15 ಗಂಟೆಯಿಂದ ಮತ್ತು ಮೇ 8 ರಂದು 1:45 ಗಂಟೆ ನಡುವೆ ನಿರ್ವಹಣಾ ಚಟುವಟಿಕೆ ಕಾರಣದಿಂದ ಡಿಜಿಟಲ್ ಸೇವೆಯಲ್ಲಿ ವ್ಯತ್ಯಯವಾಗುತ್ತದೆ.
ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಗಳಾದ ಯೊನೊ, ಯೋನೊ ಲೈಟ್, ಇಂಟರ್ನೆಟ್ ಬ್ಯಾಂಕಿಂಗ್, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೊದಲಾದವುಗಳ ಸೇವೆ ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. INB / YONO / YONO Lite / UPI ಸೇವೆಗಳ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಎಸ್‌ಬಿಐ ತಿಳಿಸಿದೆ.