ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕ್ರೆಡಿಟ್ ಕಾರ್ಡ್ ಮೊಬೈಲ್ ಬಳಸಿಕೊಂಡು ವೆಬ್ಸೈಟ್, ಮೊಬೈಲ್ ಆಪ್ ಮೂಲಕ ನಿರ್ವಹಣೆ ಮಾಡುವ ರಿಕರಿಂಗ್ ಪೇಮೆಂಟ್ ಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಇ –ಮ್ಯಾಂಡೇಟ್ ಮಾರ್ಗದರ್ಶಿಯನ್ನು ಅಕ್ಟೋಬರ್ 1 ರಿಂದ ಗ್ರಾಹಕರು ಅನುಸರಿಸಬೇಕಿದೆ ಎಂದು ಹೇಳಲಾಗಿದೆ.
ಇ- ಮ್ಯಾಂಡೇಟ್ ಮಾರ್ಗದರ್ಶಿ ಅನುಸರಿಸದವರು ಕ್ರೆಡಿಟ್ ಕಾರ್ಡ್ ಮೂಲಕ ಮರ್ಚೆಂಟ್ ಆಪ್, ವೆಬ್ಸೈಟ್ ಗಳಲ್ಲಿ ರಿಕರಿಂಗ್ ಹಣಕಾಸು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ಬಳಸಿ ಮರ್ಚೆಂಟ್ ವೆಬ್ಸೈಟ್ ಗಳು, ಮೊಬೈಲ್ ಆಪ್ ಗಳಲ್ಲಿ ನೋಂದಣಿಯಾಗಿ ರಿಕರಿಂಗ್ ಹಣಕಾಸು ವರ್ಗಾವಣೆ ಮಾಡುವವರು ಎಸ್ಬಿಐ ಕಾರ್ಡ್ ಅಕೌಂಟ್ ಗೆ ಲಾಗಿನ್ ಆಗುವ ಮೂಲಕ ಬಿಲ್ಲರ್ ಗಳನ್ನು ಆಯ್ಕೆ ಮಾಡಿ ಬಿಲ್ ಪಾವತಿಸಬಹುದಾಗಿದೆ ಎಂದು ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಿಳಿಸಲಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿಯನ್ನು https://www.sbicard.com ನಲ್ಲಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.