ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಜುಲೈ 1 ರಿಂದ ಪರಿಷ್ಕೃತ ನಿಯಮ ಜಾರಿಗೆ ಬರಲಿದ್ದು, ಬ್ಯಾಂಕ್ ಶಾಖೆಗಳಲ್ಲಿ ಅಥವಾ ಎಟಿಎಂಗಳಲ್ಲಿ ಶುಲ್ಕ ಪಾವತಿಸದೆ ತಿಂಗಳಿಗೆ ನಾಲ್ಕು ಹಣ ಪಡೆಯಬಹುದು. ನಂತರ ಪ್ರತಿ ಸಲ ಹಣ ಹಿಂಪಡೆಯುವಾಗ 15 ರೂ. ಮತ್ತು ಜಿಎಸ್ಟಿ ಪಾವತಿಸಬೇಕಿದೆ. ಎಸ್ಬಿಐ ಹೊರತಾದ ಬ್ಯಾಂಕುಗಳ ಎಟಿಎಂನಿಂದ ಹಣ ಡ್ರಾ ಮಾಡುವಾಗಲೂ ಈ ನಿಯಮ ಅನ್ವಯವಾಗುತ್ತದೆ.
ಶೂನ್ಯ ಬ್ಯಾಲೆನ್ಸ್ ಖಾತೆಗಳು ಮತ್ತು ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಹೊಂದಿರುವ ಗ್ರಾಹಕರು ಬ್ಯಾಂಕುಗಳಿಂದ, ಎಟಿಎಂನಿಂದ ವಿತ್ ಡ್ರಾ ಮತ್ತು ಚೆಕ್ಬುಕ್ ಪಡೆಯಲು ಶುಲ್ಕಗಳನ್ನು ಪರಿಷ್ಕರಿಸಲಾಗಿದೆ.
ವಾರ್ಷಿಕ 10 ಚೆಕ್ ಗಳಿರುವ ಬುಕ್ ಅನ್ನು ಎಸ್ಬಿಐ ಉಚಿತವಾಗಿ ನೀಡುತ್ತಿದ್ದು, ಇದಕ್ಕಿಂತ ಹೆಚ್ಚು ಚೆಕ್ ಬುಕ್ ಗಳು ಬೇಕಾದಲ್ಲಿ 10 ಚೆಕ್ ಗಳ ಒಂದು ಬುಕ್ ಗೆ 40 ರೂ. ಮತ್ತು ಜಿಎಸ್ಟಿ ಪಾವತಿಸಬೇಕಿದೆ. 25 ಚೆಚ್ ಗಳ ಬುಕ್ ಗೆ 75 ರೂ ಮತ್ತು ಜಿಎಸ್ಟಿ ಕಟ್ಟಬೇಕಿದೆ. ತುರ್ತಾಗಿ ಚೆಕ್ ಬುಕ್ ಬೇಕಾದಲ್ಲಿ 50 ರೂಪಾಯಿ ಕೊಡಬೇಕು. ಜೊತೆಗೆ ಬಿಎಸ್ಟಿಯನ್ನೂ ಪಾವತಿಸಬೇಕಿದೆ. ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಲಾಗಿದೆ.