alex Certify SBI ಗ್ರಾಹಕರಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗಿನ ಆನ್ಲೈನ್ IMPS ವಹಿವಾಟು ಉಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗಿನ ಆನ್ಲೈನ್ IMPS ವಹಿವಾಟು ಉಚಿತ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. 5 ಲಕ್ಷ ರೂಪಾಯಿವರೆಗಿನ ಡಿಜಿಟಲ್ ತಕ್ಷಣದ ಪಾವತಿ ಸೇವೆ(ಐಎಂಪಿಎಸ್) ವಹಿವಾಟುಗಳಿಗೆ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು SBI ಘೋಷಿಸಿದೆ. ಇದು ಫೆಬ್ರವರಿ 1, 2022 ರಿಂದ ಅನ್ವಯವಾಗಲಿದೆ.

ಎಸ್‌ಬಿಐ ಗ್ರಾಹಕರು ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಸೌಲಭ್ಯಗಳನ್ನು IMPS ವೈಶಿಷ್ಟ್ಯವನ್ನು 5 ಲಕ್ಷದವರೆಗಿನ ವಹಿವಾಟುಗಳಿಗೆ ಉಚಿತವಾಗಿ ಬಳಸಬಹುದು. ಈ ಹಿಂದೆ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗ್ರಾಹಕರಿಗೆ 2 ಲಕ್ಷ ರೂ. ವರೆಗಿನ ಆನ್‌ಲೈನ್ IMPS ವಹಿವಾಟುಗಳನ್ನು ಮಾಡಲು ಅವಕಾಶ ನೀಡಿತ್ತು. ಈಗ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಜನವರಿ 4 ರಂದು ಪತ್ರಿಕಾ ಪ್ರಕಟಣೆಯಲ್ಲಿ, ಎಸ್‌ಬಿಐ, ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ 5 ಲಕ್ಷ ರೂ.ವರೆಗೆ ಐಎಂಪಿಎಸ್ ವಹಿವಾಟಿನ ಮೇಲೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ. ಅಸ್ತಿತ್ವದಲ್ಲಿರುವ ಸ್ಲ್ಯಾಬ್‌ಗಳಲ್ಲಿ ಬ್ರಾಂಚ್ ಚಾನೆಲ್ ಮೂಲಕ ಮಾಡಲಾದ IMPS ಗಾಗಿ ಸೇವಾ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಆದಾಗ್ಯೂ, 2,00,000 ರೂ. ನಿಂದ 5,00,000 ರೂ.ವರೆಗಿನ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ. ಈ ಸ್ಲ್ಯಾಬ್‌ಗೆ ಪ್ರಸ್ತಾವಿತ ಸೇವಾ ಶುಲ್ಕಗಳು 20 ರೂ.+ ಜಿಎಸ್‌ಟಿ ಆಗಿದೆ. IMPS ಮೇಲಿನ ಸೇವಾ ಶುಲ್ಕಗಳು NEFT/RTGS ವಹಿವಾಟುಗಳಲ್ಲಿನ ಸೇವಾ ಶುಲ್ಕಗಳಿಗೆ ಅನುಗುಣವಾಗಿರುತ್ತವೆ ಎಂದು ಹೇಳಲಾಗಿದೆ.

ಗ್ರಾಹಕರು IMPS ವಹಿವಾಟಿಗಾಗಿ SBI ಶಾಖೆಗೆ ಭೇಟಿ ನೀಡಿದರೆ, ಅಸ್ತಿತ್ವದಲ್ಲಿರುವ ಸ್ಲ್ಯಾಬ್‌ಗಳಲ್ಲಿ IPMS ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ, 1,000 ರೂ. ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಆಫ್‌ಲೈನ್ IMPS ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ, ಆದರೆ, 1,000 ರೂ.ಗಿಂತ ಹೆಚ್ಚಿನ ಮತ್ತು 10,000 ರೂ. ವರೆಗಿನ ವಹಿವಾಟುಗಳಿಗೆ 2 ರೂ. ಸೇವಾ ಶುಲ್ಕ + ಜಿಎಸ್‌ಟಿ ವಿಧಿಸಲಾಗುತ್ತದೆ.

ಅದೇ ರೀತಿ, 10,000 ರೂ.ಗಿಂತ ಹೆಚ್ಚಿನ ಮತ್ತು 1,00,000 ರೂ. ವರೆಗಿನ ಆಫ್‌ಲೈನ್ IMPS ವಹಿವಾಟುಗಳಿಗೆ  4 ರೂ. ಸೇವಾ ಶುಲ್ಕ + ಜಿಎಸ್‌ಟಿ ವಿಧಿಸಲಾಗುತ್ತದೆ. ಅಲ್ಲದೆ, ಗ್ರಾಹಕರು 1,00,000 ರೂ. ಮತ್ತು 2,00,000 ರೂ. ವರೆಗಿನ ಆಫ್‌ಲೈನ್ ವಹಿವಾಟುಗಳ ಮೇಲೆ 12 ರೂ. ಸೇವಾ ಶುಲ್ಕ + ಜಿಎಸ್‌ಟಿ ಪಾವತಿಸಬೇಕಾಗುತ್ತದೆ, 5,00,000 ರೂ. ವಹಿವಾಟಿಗೆ 20 ರೂ. ಸೇವಾ ಶುಲ್ಕ + ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...