ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI) ಗ್ರಾಹಕರು ನಾಳೆ ಅಂದರೆ ಜನವರಿ 22 ರಂದು ಅನಾನುಕೂಲತೆ ಎದುರಿಸಬೇಕಾಗಬಹುದು. ಬ್ಯಾಂಕಿನ ಸೇವೆಗಳ ತಾಂತ್ರಿಕ ಉನ್ನತೀಕರಣದ ಕಾರಣದಿಂದಾಗಿ ಜನವರಿ 22 ರ ರಾತ್ರಿ 2 ರಿಂದ 8:30 ರವರೆಗೆ ಗ್ರಾಹಕರು ಬ್ಯಾಂಕ್ ನ ಆನ್ ಲೈನ್ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಟ್ವೀಟ್ ಮೂಲಕ ಬ್ಯಾಂಕ್ ಈ ಮಾಹಿತಿ ನೀಡಿದೆ. ಎಸ್‌ಬಿಐ ಬ್ಯಾಂಕ್ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ ಯೋನೋ ಲೈಟ್, ಯೋನೋ ಬ್ಯುಸಿನೆಸ್ ಮತ್ತು ಯುಪಿಐ ಸೇವೆಗಳು ಜ. 22 ರಂದು 2 ರಿಂದ 8.30 ಗಂಟೆವರೆಗೆ(ಬೆಳಗಿನ ಸಮಯ) ಗ್ರಾಹಕರಿಗೆ ಲಭ್ಯವಿರುವುದಿಲ್ಲ.
ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ನಾವು ಶ್ರಮಿಸುತ್ತಿರುವಾಗ ನಮ್ಮ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ಉಳಿಯಲು ನಾವು ವಿನಂತಿಸುತ್ತೇವೆ ಎಂದು SBI ಟ್ವೀಟ್‌ನಲ್ಲಿ ಬರೆಯಲಾಗಿದೆ. ಬ್ಯಾಂಕ್‌ನ ಅಧಿಕೃತ ಟ್ವಿಟರ್ ಖಾತೆಯ ಪ್ರಕಾರ, SBI ಗ್ರಾಹಕರು ಶನಿವಾರ ಮುಂಜಾನೆ ಇಂಟರ್ನೆಟ್ ಬ್ಯಾಂಕಿಂಗ್, YONO, YONO Lite, UPI ನಂತಹ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಬ್ಯಾಂಕಿಂಗ್ ಸೇವೆಯನ್ನು ಸುಧಾರಿಸಲು ಎಸ್.ಬಿ.ಐ. ಬ್ಯಾಂಕ್ ತಂತ್ರಜ್ಞಾನವನ್ನು ನವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಕಳೆದ ವರ್ಷ ಡಿಸೆಂಬರ್ 11 ರಂದು ಎಸ್.ಬಿ.ಐ. ಆನ್‌ಲೈನ್ ಸೇವೆಗಳನ್ನು 5 ಗಂಟೆಗಳ ಕಾಲ ಮುಚ್ಚಲಾಗಿತ್ತು.