ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಗಿಂತ ಹೆಚ್ಚು ಹಣವನ್ನು ನೀವು ವಿತ್ ಡ್ರಾ ಮಾಡಬಹುದು. ಬ್ಯಾಂಕ್ ಈ ಸೌಲಭ್ಯವನ್ನು ಓವರ್ ಡ್ರಾಫ್ಟ್ ಎಂದು ಕರೆಯಲಾಗುತ್ತದೆ.
ಓವರ್‌ಡ್ರಾಫ್ಟ್ ಒಂದು ರೀತಿಯ ಸಾಲ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಬಹುದು.ಈ ಹೆಚ್ಚುವರಿ ಹಣವನ್ನು ನಿರ್ದಿಷ್ಟ ಅವಧಿಯೊಳಗೆ ಮರುಪಾವತಿಸಬೇಕಾಗುತ್ತದೆ. ಇದಕ್ಕೆ ಬಡ್ಡಿಯನ್ನು ನೀಡಬೇಕು. ಪ್ರತಿ ದಿನದ ಲೆಕ್ಕದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
ಬ್ಯಾಂಕ್ ಕೆಲ ಗ್ರಾಹಕರಿಗೆ ಪೂರ್ವ ಅನುಮೋದಿತ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ. ಕೆಲವು ಗ್ರಾಹಕರು ಇದಕ್ಕಾಗಿ ಪ್ರತ್ಯೇಕ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದಕ್ಕೆ ಲಿಖಿತವಾಗಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಬೇಕು. ಕೆಲವು ಬ್ಯಾಂಕುಗಳು ಈ ಸೌಲಭ್ಯಕ್ಕಾಗಿ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತವೆ. ಒಂದು ಸುರಕ್ಷಿತ ಮತ್ತು ಇನ್ನೊಂದು ಅಸುರಕ್ಷಿತ ಓವರ್ ಡ್ರಾಫ್ಟ್ ಇದೆ. ಎಫ್‌ಡಿ, ಷೇರುಗಳು, ಮನೆ, ಸಂಬಳ, ವಿಮಾ ಪಾಲಿಸಿ, ಬಾಂಡ್‌ಗಳಿಗೆ ಓವರ್‌ಡ್ರಾಫ್ಟ್ ಪಡೆಯಬಹುದು. ಎಲ್ಲ ಸಾಲಗಳಂತೆ ಈ ಸಾಲ ಮರುಪಾವತಿಗೂ ನಿಗದಿತ ಅವಧಿಯಿರುತ್ತದೆ. ಅವಧಿಗೆ ಮುಂಚಿತವಾಗಿ ಸಾಲವನ್ನು ಮರುಪಾವತಿ ಮಾಡಿದ್ರೆ ಪೂರ್ವಪಾವತಿ ಶುಲ್ಕ ವಿಧಿಸಬೇಕು. ಆದ್ರೆ ಓವರ್ ಡ್ರಾಫ್ಟ್ ನಲ್ಲಿ ಪೂರ್ವಪಾವತಿ ಶುಲ್ಕವಿರುವುದಿಲ್ಲ.ಹಾಗೆ ಇಎಂಐನಲ್ಲಿ ಸಾಲ ತೀರಿಸುವ ಸೌಲಭ್ಯವಿರುವುದಿಲ್ಲ. ನಿಗದಿತ ಅವಧಿಯೊಳಗೆ ನೀವು ಯಾವಾಗ ಬೇಕಾದರೂ ಹಣವನ್ನು ಮರುಪಾವತಿಸಬಹುದು.