ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದೆ. ಬದಲಾದ ನಿಯಮಗಳ ಪ್ರಕಾರ, ಉಚಿತ ವಹಿವಾಟು ಮಿತಿ ಮುಗಿದ ನಂತ್ರ ಖಾತೆದಾರರು ಶುಲ್ಕ ಪಾವತಿಸಬೇಕು.
ಎಸ್‌ಬಿಐ ಖಾತೆದಾರರ ಖಾತೆಯಲ್ಲಿ ಹಣವಿಲ್ಲದ ಕಾರಣ ಎಟಿಎಂ ವಹಿವಾಟು ವಿಫಲವಾದ್ರೂ ದಂಡ ಪಾವತಿಸಬೇಕಾಗುತ್ತದೆ. ಎಸ್‌ಬಿಐನ ಈ ನಿಯಮಗಳು 1 ಜುಲೈ ರಿಂದಲೇ ಜಾರಿಗೆ ಬಂದಿವೆ.
ಮೆಟ್ರೋ ನಗರಗಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಎಟಿಎಂನಿಂದ 8 ಬಾರಿ ಉಚಿತ ವಹಿವಾಟು ನಡೆಸಬಹುದು. ಇದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ.
ಮೆಟ್ರೋ ಅಲ್ಲದ ನಗರಗಳಲ್ಲಿ ಎಸ್‌ಬಿಐ ಖಾತೆದಾರರು 10 ಬಾರಿ ಎಟಿಎಂಗಳಿಂದ ಉಚಿತ ವಹಿವಾಟು ನಡೆಸಬಹುದು. 5 ಬಾರಿ ಎಸ್‌ಬಿಐ ಎಟಿಎಂ ಮತ್ತು 5 ಬಾರಿ ಇತರ ಬ್ಯಾಂಕುಗಳ ಎಟಿಎಂಗಳಿಂದ ವಹಿವಾಟು ನಡೆಸಬಹುದು. ಇದನ್ನು ಮೀರಿದ್ರೆ 10ರಿಂದ 20 ರೂಪಾಯಿ ದಂಡ ವಿಧಿಸಲಾಗುವುದು. ಖಾತೆಯಲ್ಲಿ ಹಣವಿಲ್ಲದೆ ವಹಿವಾಟು ನಡೆಸಿ ವಿಫಲವಾದರೆ ಖಾತೆದಾರ 20 ರೂಪಾಯಿ ದಂಡ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.