ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಬಾಗಿಲಿಗೆ ಎಟಿಎಂ ಸೇವೆ ಒದಗಿಸಲಿದೆ.
ಒಂದು ಫೋನ್ ಕರೆ ಮಾಡಿದಲ್ಲಿ ಎಟಿಎಂ ಮನೆಬಾಗಿಲಿಗೆ ಬರಲಿದೆ. ಉತ್ತರ ದೇಶದ ಲಖ್ನೋದಲ್ಲಿ ಎಸ್ಬಿಐ ವತಿಯಿಂದ ಪ್ರಾಯೋಗಿಕವಾಗಿ ಮನೆಬಾಗಿಲಿಗೆ ಎಟಿಎಂ ಸೇವೆ ಆರಂಭಿಸಲಾಗಿದೆ.
70 ವರ್ಷ ದಾಟಿದ ಹಿರಿಯ ನಾಗರಿಕರು, ವಿಕಲಚೇತನರಿಗಾಗಿ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್ ಶಾಖೆಯ 5 ಕಿಲೋಮೀಟರ್ ಗ್ರಾಹಕರು ಕರೆ ಮಾಡಿದರೆ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿದರೆ ಸಂಚಾರಿ ಎಟಿಎಂ ಅವರ ಮನೆಗಳಿಗೆ ಬರುತ್ತದೆ.
ಗರಿಷ್ಠ 24 ಸಾವಿರ ರೂಪಾಯಿವರೆಗೆ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಹಣಕಾಸೇತರ ವಹಿವಾಟು ಇದ್ದಲ್ಲಿ 60 ರೂ. ಶುಲ್ಕ, ಜಿಎಸ್ಟಿ ಹಣಕಾಸು ವಹಿವಾಟಿಗೆ 100 ರೂಪಾಯಿ ಹಾಗೂ ಜಿಎಸ್ಟಿ ನೀಡಬೇಕಾಗುತ್ತದೆ ಎನ್ನಲಾಗಿದೆ.