ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಲ್ಲಿ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತಂದಿದೆ.
ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸಲಾಗಿದೆ. ಆನ್ಲೈನ್ ವಂಚನೆ ತಡೆಯುವ ಉದ್ದೇಶದಿಂದ ಒಟಿಪಿ ಆಧಾರಿತ ಎಟಿಎಂ ಹಣ ವಿತ್ ಡ್ರಾ ಮಾಡುವ ಸೇವೆಯನ್ನು ಜಾರಿಗೆ ತಂದಿದೆ.
ಮೊದಲ ಬಾರಿಗೆ 2020 ರಲ್ಲಿ ಎಟಿಎಂನಿಂದ ಹಣ ಪಡೆಯಲು ಒಟಿಪಿ ಪರಿಚಯಿಸಿದ್ದ ಎಸ್ಬಿಐ ಈಗ ಹೊಸ ಪ್ರಕ್ರಿಯೆ ಅನ್ವಯ ಗ್ರಾಹಕರು ಬ್ಯಾಂಕ್ ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ಮಾತ್ರ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತದೆ.
ಇದರಿಂದ ಬೇರೆಯವರ ಎಟಿಎಂ ಕಾರ್ಡ್ ನಲ್ಲಿ ಹಣ ವಿತ್ ಡ್ರಾ ಮಾಡುವುದನ್ನು ತಡೆಯಲು ತಡೆಯಬಹುದಾಗಿದೆ. ಗ್ರಾಹಕರು ಎಟಿಎಂಗಳಲ್ಲಿ ವಹಿವಾಟು ನಡೆಸುವಾಗ ನಮ್ಮ ಒಟಿಪಿ ಆಧಾರಿತ ಹಣ ವಿತ್ ಡ್ರಾ ಮಾಡುವ ಸೇವೆ ಪಡೆಯಬಹುದಾಗಿದೆ. ಮೊಬೈಲ್ ಗೆ ಬರುವ ಒಟಿಪಿಯನ್ನು ಗ್ರಾಹಕರು ವಹಿವಾಟು ದೃಢೀಕರಿಸಲು ನಮೂದಿಸಿದರೆ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡಬಹುದು. ಇದರೊಂದಿಗೆ ಎಸ್ಬಿಐ ಗ್ರಾಹಕರು www.onlinesbi.com ನಲ್ಲಿ ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದಾಗಿದೆ.