ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಟಿಎಂನಿಂದ ಹಣ ವಿತ್ ಡ್ರಾ, ಚೆಕ್ಬುಕ್, ಹಣ ವರ್ಗಾವಣೆ ಮತ್ತು ಹಣಕಾಸೇತರ ವಹಿವಾಟಿನ ಮೇಲಿನ ಸೇವಾ ಶುಲ್ಕವನ್ನು ಜುಲೈ 1 ರಿಂದ ಹೆಚ್ಚಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಬ್ಯಾಂಕ್ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ತಿಂಗಳಲ್ಲಿ ನಾಲ್ಕಕ್ಕಿಂತಲೂ ಹೆಚ್ಚು ಬಾರಿ ಬ್ಯಾಂಕ್ ಅಥವಾ ಬ್ಯಾಂಕ್ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ರೆ ಬ್ಯಾಂಕ್ ಅದಕ್ಕೆ ಶುಲ್ಕ ವಿಧಿಸಲಿದೆ. ನಂತ್ರದ ಪ್ರತಿ ವಹಿವಾಟಿಗೆ 15 ರೂಪಾಯಿ ಜೊತೆ ಜಿಎಸ್ಟಿ ಶುಲ್ಕ ವಿಧಿಸಲಾಗುವುದು. ಎಸ್ಬಿಐ ಅಥವಾ ಬೇರೆ ಯಾವುದೇ ಎಟಿಎಂನಿಂದ ಒಂದು ತಿಂಗಳಿಗೆ ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದ್ರೆ ಪ್ರತಿ ವಿತ್ ಡ್ರಾಗೆ 15 ರೂಪಾಯಿ ಸೇವಾ ಶುಲ್ಕ ನೀಡಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಎಸ್ಬಿಡಿ ಖಾತೆದಾರರಿಗೆ 10 ಚೆಕ್ ಗಳಿಗೆ ಯಾವುದೇ ಶುಲ್ಕವಿಲ್ಲ. 10 ರ ನಂತರ 40 ರೂಪಾಯಿ ಜೊತೆಗೆ ಜಿಎಸ್ಟಿ ವಿಧಿಸಲಾಗುತ್ತದೆ. 25 ನಕಲು ಚೆಕ್ ಗಳಿಗೆ 75 ರೂಪಾಯಿ ಮತ್ತು ತುರ್ತು ಚೆಕ್ ಬುಕ್ ಗೆ 50 ರೂಪಾಯಿ ಮತ್ತು ಜಿಎಸ್ಟಿ ವಿಧಿಸಸಲಾಗುತ್ತದೆ. ಹಿರಿಯ ನಾಗರಿಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಬಿಎಸ್ಬಿಡಿ ಖಾತೆ ಎಂದ್ರೆ ಝೀರೋ ಖಾತೆ. ಈ ಯೋಜನೆಯಡಿ ಬಡವರನ್ನು ಬ್ಯಾಂಕ್ ನೊಂದಿಗೆ ಸಂಪರ್ಕಿಸಲಾಗಿದೆ. ಹಣವಿಲ್ಲದಿದ್ದರೂ ಸಾಮಾನ್ಯ ವ್ಯಕ್ತಿ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು.