ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹಸಾಲ ದರದಲ್ಲಿ 25 ಬಿಪಿಎಸ್ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಎಸ್ಬಿಐ ಗೃಹಸಾಲ ಪಡೆದ ಗ್ರಾಹಕರು ಸಿಬಿಲ್ ಸ್ಕೋರ್ ಮತ್ತು ಯೋನೋ ಮೂಲಕ ವ್ಯವಹರಿಸಿದ 75 ಲಕ್ಷ ರೂ. ಮೇಲಿನ ಸಾಲಕ್ಕೆ ಇದು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
30 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗಿನ ಗೃಹಸಾಲ ಪಡೆದವರಿಗೆ ಹಿಂದಿದ್ದ 10 ಬಿಪಿಎಸ್ ಪಾಯಿಂಟ್ ಗಳಿಂದ 20 ಬಿಪಿಎಸ್ ವರೆಗೆ ಕ್ರೆಡಿಟ್ ಸ್ಕೋರ್ ಆಧಾರಿತ ರಿಯಾಯಿತಿ ನೀಡಲಾಗುತ್ತದೆ. ಯೋನೋ ಮೂಲಕ ವ್ಯವಹರಿಸುವ ಗ್ರಾಹಕರು ಹೆಚ್ಚುವರಿಯಾಗಿ ರಿಯಾಯಿತಿ ಪಡೆಯಲಿದ್ದಾರೆ.
ಎಸ್ಬಿಐ 30 ಲಕ್ಷ ರೂಪಾಯಿವರೆಗಿನ ಗೃಹಸಾಲಕ್ಕೆ ಶೇಕಡ 6.90 ರಷ್ಟು, 30 ಲಕ್ಷ ರೂ. ಮೇಲ್ಪಟ್ಟ ಗೃಹ ಸಾಲಕ್ಕೆ ಶೇಕಡ 7 ರಷ್ಟು ಬಡ್ಡಿದರ ವಿಧಿಸುತ್ತದೆ. ಕಾರು, ಚಿನ್ನ, ವೈಯಕ್ತಿಕ ಸಾಲಗಳ ಮೇಲೆ ಶೇಕಡ 100 ರಷ್ಟು ಸಂಸ್ಕರಣಾ ಶುಲ್ಕ ಮನ್ನಾ ಮಾಡುವ ಮೂಲಕ ಈಗಾಗಲೇ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲಾಗಿದೆ.
ಗ್ರಾಹಕರು ಕಾರು ಸಾಲದ ಮೇಲೆ ಶೇಕಡ 7.5 ರಿಂದ ಆರಂಭವಾಗುವ ಕಡಿಮೆ ಬಡ್ಡಿ ದರ ಪಡೆಯುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲದ ಗ್ರಾಹಕರಿಗೆ ಕ್ರಮವಾಗಿ ಶೇಕಡ 7.5 ಮತ್ತು ಶೇಕಡ 9.6 ರಷ್ಟು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಗ್ರಾಹಕರು ಕೆಲವು ಯೋಜನೆಯ ಮೂಲಕ ಹೆಚ್ಚಿನ ಲಾಭ ಪಡೆಯಲು ಅವಕಾಶ ನೀಡಲಾಗಿದೆ. ಆಸ್ತಿ ಠೇವಣಿ, ಗ್ರಾಹಕರು ಮತ್ತು ನೌಕರರ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ.