ಭಾರತ ಡಿಜಿಟಲ್ ಆಗ್ತಿದೆ. ಸ್ಮಾರ್ಟ್ಫೋನ್ ಬಳಸಿ ಆನ್ಲೈನ್ ವಹಿವಾಟು ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಜನರ ಕೆಲಸವನ್ನು ಸುಲಭಗೊಳಿಸಿದೆ. ಆದ್ರೆ ಆನ್ಲೈನ್ ಮೋಸದ ಸಂಖ್ಯೆಯೂ ಹೆಚ್ಚಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಬ್ಯಾಂಕಿಂಗ್ ಮೋಸದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಎಸ್ಬಿಐ ಈ ಬಗ್ಗೆ ವಿಡಿಯೋ ಒಂದನ್ನು ಟ್ವಿಟ್ ಮಾಡಿದೆ. ಯಾವುದೇ ಕಾರಣಕ್ಕೂ ನಿಮ್ಮ ಫೋನ್ ಗೆ ಬರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ನಿಮ್ಮ ಖಾತೆಗೆ ಎಂದೂ ಹಣ ಬರುವುದಿಲ್ಲ. ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಕ್ಯೂಆರ್ ಕೋಡ್ ಮೂಲಕ ಇತ್ತೀಚಿನ ದಿನಗಳಲ್ಲಿ ಮೋಸ ಹೆಚ್ಚಾಗ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಫೋನ್ ಗೆ ಬರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ.
ನಿಮ್ಮ ಖಾತೆಗೆ ಲಕ್ಷಗಟ್ಟಲೆ ಹಣ ಬರ್ತಿದೆ. ಈ ಲಿಂಕ್ ಓಪನ್ ಮಾಡಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂಬ ಸಂದೇಶಗಳು ಬರ್ತಿರುತ್ತವೆ. ಆದ್ರೆ ಇದು ಸುಳ್ಳು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಹಣ ಬರುವ ಬದಲು ನಿಮ್ಮ ಖಾತೆ ಬರಿದಾಗುತ್ತದೆ ಎಂದು ಬ್ಯಾಂಕ್ ಟ್ವೀಟರ್ ನಲ್ಲಿ ಹೇಳಿದೆ.