ದೇಶದ ಪ್ರತಿಷ್ಟಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾನುವಾರ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ , ಯೊನೋ ಸೇರಿದಂತೆ ಇನ್ನೂ ಕೆಲ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದು ಮಾಹಿತಿ ನೀಡಿದೆ. ಜೂನ್ ತಿಂಗಳಲ್ಲಿ ಮತ್ತೊಮ್ಮೆ ಬ್ಯಾಂಕಿಂಗ್ ಸೇವೆ ನಿರ್ವಹಣಾ ಚಟುವಟಿಕೆಗೆ ಮುಂದಾಗಿರುವ ಎಸ್ಬಿಐ ಗ್ರಾಹಕರಿಗೆ ಈ ಮಹತ್ವದ ಮಾಹಿತಿಯನ್ನ ರವಾನಿಸಿದೆ.
ಜೂನ್ 20 ರಂದು ನಿರ್ವಹಣೆಯ ಕೆಲಸ ಇರೋದ್ರಿಂದ ಭಾನುವಾರದಂದು ಸುಮಾರು 40 ನಿಮಿಷಗಳ ಕಾಲ ಇಂಟರ್ನೆಟ್ ಬ್ಯಾಂಕ್ ಸೇವೆಗಳು ಲಭ್ಯವಿರೋದಿಲ್ಲ ಎಂದು ಟ್ವಿಟರ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಉತ್ತಮ ಬ್ಯಾಂಕಿಂಗ್ ಸೇವೆಯನ್ನ ನೀಡಲು ನಾವು ಶ್ರಮಿಸುತ್ತಿರೋದ್ರಿಂದ ನಮ್ಮ ಗೌರವಾನ್ವಿತ ಗ್ರಾಹಕರು ಈ ಅಡಚಣೆಯನ್ನ ಸಹಿಸಿಕೊಳ್ಳಬೇಕೆಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಎಸ್ಬಿಐ ಟ್ವೀಟ್ನಲ್ಲಿ ಮನವಿ ಮಾಡಿದೆ. ಟ್ವೀಟ್ನಲ್ಲಿ ಒಂದು ಫೋಟೋ ಶೇರ್ ಮಾಡಿರುವ ಎಸ್ಬಿಐ 01.00 ಗಂಟೆ ಹಾಗೂ01 :40 ಗಂಟೆಗಳ ಅವಧಿಯಲ್ಲಿ ನಿರ್ವಹಣಾ ಚಟುವಟಿಕೆ ಮಾಡೋದಾಗಿ ಮಾಹಿತಿ ನೀಡಿದೆ.
ಈ ಸಂದರ್ಭದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್, ಯುಪಿಐ ಸೇವೆಗಳು ಲಭ್ಯವಿರೋದಿಲ್ಲ. ಈ ಅಡಚಣೆಗಾಗಿ ನಾವು ವಿಷಾದ ವ್ಯಕ್ತಪಡಿಸುತ್ತಿದ್ದು ದಯಮಾಡಿ ಇದನ್ನು ಸಹಿಸಿಕೊಳ್ಳಿ ಎಂದು ಗ್ರಾಹಕರಲ್ಲಿ ಎಸ್ಬಿಐ ಮನವಿ ಮಾಡಿದೆ.
https://twitter.com/TheOfficialSBI/status/1405892563614113794