ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಸ್‌ಬಿಐ ನ ಕೆಲ ಸೇವೆಗಳಿಗೆ ಇಂದು ಮಧ್ಯರಾತ್ರಿಯಿಂದ ಮೇ 23ರವರೆಗೆ ಅಡ್ಡಿಯಾಗಲಿದೆ. ಈ ಸಮಯದಲ್ಲಿ ಬ್ಯಾಂಕಿನ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಲೈಟ್, ಯುಪಿಐ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ. ತುರ್ತು ಕೆಲಸವಿದ್ದರೆ ಇಂದೇ ಇತ್ಯರ್ಥಪಡಿಸಿಕೊಳ್ಳಿ ಎಂದು ಬ್ಯಾಂಕ್ ಹೇಳಿದೆ.
ಎಸ್‌ಬಿಐ ಬ್ಯಾಂಕ್ ಈ ಬಗ್ಗೆ ಅಧಿಕೃತ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ನಿರ್ವಹಣಾ ಕಾರ್ಯದಿಂದಾಗಿ ಮೇ 21 ರಿಂದ ಮೇ 23 ರವರೆಗೆ ಬ್ಯಾಂಕಿನ ಕೆಲವು ಸೇವೆಗಳಿಗೆ ಅಡಚಣೆ ಉಂಟಾಗುತ್ತದೆ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಎಸ್‌ಬಿಐ ಪ್ರಕಾರ, ಗ್ರಾಹಕರಿಗೆ ನಿರಂತರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮತ್ತು ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಈ ನಿರ್ವಹಣಾ ಕಾರ್ಯವನ್ನು ಮಾಡಲಾಗುತ್ತಿದೆ. ಮೇ 21 ರಂದು ರಾತ್ರಿ 10.45 ರಿಂದ ಮೇ 22 ರಂದು ರಾತ್ರಿ 10. 15 ರವರೆಗೆ ಮತ್ತು ಮೇ 23 ರಂದು ಬೆಳಿಗ್ಗೆ 2.40 ರಿಂದ 6.10 ರವರೆಗೆ ಬ್ಯಾಂಕ್ ಸೇವೆಯಲ್ಲಿ ಅಡಚಣೆಯಾಗಲಿದೆ. ಗ್ರಾಹಕರಿಗೆ ಈ ಸಮಯದಲ್ಲಿ ವಹಿವಾಟು ಸಾಧ್ಯವಿಲ್ಲವೆಂದು ಬ್ಯಾಂಕ್ ಹೇಳಿದೆ.
ಎಸ್‌ಬಿಐ ಗ್ರಾಹಕರಿಗೆ ಕೆವೈಸಿಯನ್ನು ನವೀಕರಿಸುವ ಗಡುವನ್ನು ಮೇ 31 ರವರೆಗೆ ವಿಸ್ತರಿಸಿದೆ. ಕೆವೈಸಿ ನವೀಕರಣಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ರೂಪದಲ್ಲಿ ಕೆವೈಸಿ ಪೂರ್ಣಗೊಳಿಸಬಹುದು.