ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ 7 ರೀತಿಯ ಎಟಿಎಂ ಡೆಬಿಟ್ ಕಾರ್ಡ್ ನೀಡ್ತಿದೆ. ಈ ಕಾರ್ಡ್ ನಲ್ಲಿ ಪ್ರತಿ ದಿನ ಹಣ ವಿತ್ ಡ್ರಾ ಮಾಡುವ ಮಿತಿ 20,000ದಿಂದ 1 ಲಕ್ಷ ರೂಪಾಯಿಯಾಗಿರುತ್ತದೆ.
ಜುಲೈ 1 ರಿಂದ ಜಾರಿಗೆ ಬರುವಂತೆ ಎಸ್‌ಬಿಐ ತನ್ನ ಎಟಿಎಂ ವಿತ್ ಡ್ರಾ ನಿಯಮಗಳನ್ನು ಪರಿಷ್ಕರಿಸಿದೆ. ಅಧಿಕೃತ ವೆಬ್‌ಸೈಟ್ ಮಾಹಿತಿಯ ಪ್ರಕಾರ, ಎಸ್‌ಬಿಐ ತನ್ನ ನಿಯಮಿತ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಿಗೆ 8 ಉಚಿತ ವಹಿವಾಟನ್ನು ನೀಡುತ್ತದೆ.
ಎಸ್.ಬಿ.ಐ. ನೀಡುವ ಕಾರ್ಡ್ ವಿವರ ಇಲ್ಲಿದೆ. ಎಸ್‌ಬಿಐ, ಕ್ಲಾಸಿಕ್ ಮತ್ತು ಮೆಸ್ಟ್ರೋ ಡೆಬಿಟ್ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ಇದರ ಎಟಿಎಂ ವಿತ್ ಡ್ರಾ ಮಿತಿ ಪ್ರತಿ ದಿನ 20,000 ರೂಪಾಯಿಯಾಗಿರುತ್ತದೆ.
ಎಸ್‌ಬಿಐ, ಗ್ಲೋಬಲ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ನೀಡುತ್ತದೆ. ಇದರ ಮಿತಿ 40,000 ರೂಪಾಯಿ. ಎಸ್‌ಬಿಐ ಗೋಲ್ಡ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ನೀಡುತ್ತದೆ. ಇದರ ಮಿತಿ 50,000 ರೂಪಾಯಿ. ಎಸ್‌ಬಿಐ ಪ್ಲಾಟಿನಂ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ 1,00,000 ರೂಪಾಯಿ.
ಎಸ್.ಬಿ.ಐ. ಎನ್ ಟಚ್ ಟ್ಯಾಪ್ & ಗೋ ಡೆಬಿಟ್ ಕಾರ್ಡ್ ನೀಡುತ್ತದೆ. ಅದ್ರ ಮಿತಿ 40,000 ರೂಪಾಯಿ. ಎಸ್‌ಬಿಐ ಮುಂಬೈ ಮೆಟ್ರೋ ಕಾಂಬೊ ಕಾರ್ಡ್ ನೀಡುತ್ತಿದ್ದು, ಇದು 40,000 ರೂಪಾಯಿ ಮಿತಿ ಹೊಂದಿದೆ. ಎಸ್‌ಬಿಐ ಮೈ ಕಾರ್ಡ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ನೀಡ್ತಿದ್ದು, ಇದು 40,000 ರೂಪಾಯಿ ಮಿತಿ ಹೊಂದಿದೆ. ಅಕ್ಟೋಬರ್ 18ರಿಂದಲೇ ಒಟಿಪಿ ಆಧಾರಿತ ಹಣ ವಿತ್ ಡ್ರಾ ಸೇವೆಯನ್ನು ಎಸ್ಬಿಐ ಶುರು ಮಾಡಿದೆ.