ನೀವು ಎಸ್ಬಿಐ ಖಾತೆದಾರರೇ..? ಹಾಗಾದ್ರೆ ಈ ಸುದ್ದಿಯನ್ನು ಓದಲೇಬೇಕು. ಎಸ್ಬಿಐ ಬ್ಯಾಂಕ್ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಅಕಸ್ಮಾತ್ ನೀವೇನಾದ್ರೂ ಈ ಬದಲಾವಣೆಗಳೇನು ಎಂದು ತಿಳಿಯದೇ ಇದ್ದಲ್ಲಿ ದಂಡ ಕಟ್ಟುವುದು ಗ್ಯಾರಂಟಿ.
ಹೌದು, ಠೇವಣಿ ಇಡುವುದು, ಕನಿಷ್ಠ ಬಾಕಿ, ಎಸ್ಎಂಎಸ್ ಶುಲ್ಕ ಹಾಗೂ ಎಟಿಎಂನಿಂದ ಹಣ ಹಿಂಪಡೆಯುವ ವಿಧಾನಗಳಲ್ಲಿ ಬದಲಾವಣೆ ಮಾಡಲಾಗಿದೆ. ಕೊರೊನಾದಿಂದಾಗಿ ಈಗಾಗಲೇ ಜನರ ಜೀವನ ಬೀದಿಗೆ ಬಿದ್ದಿದೆ. ಹೀಗಾಗಿ ಮೊದಲಿನ ಹಾಗೆ ಜೀವನ ಮಾಡುವುದು ಕಷ್ಟವೇ ಸರಿ.
ಹೀಗಿರುವಾಗ ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಎಂದರೆ ಕಷ್ಟಸಾಧ್ಯ. ಮಿನಿಮಮ್ ಬ್ಯಾಲೆನ್ಸ್ ಇಲ್ಲದೇ ಇದ್ದರೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇನ್ಮುಂದೆ ಹಾಗಲ್ಲ. ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಲ್ಲದೆ ಇದ್ದರೆ ಯಾವುದೇ ಶುಲ್ಕ ನೀಡುವಂತಿಲ್ಲ.
ಇನ್ನು ಎಟಿಎಂ ನಿಂದ ಹಣ ಪಡೆಯಲು 8 ಬಾರಿ ಅವಕಾಶ ನೀಡಲಾಗುತ್ತಿದೆ. 9ನೇ ಬಾರಿಗೆ ಎಟಿಎಂನಿಂದ ಹಣ ಪಡೆದರೆ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಉಳಿತಾಯ ಖಾತೆದಾರರಿಗೆ ಬ್ಯಾಂಕ್ನಿಂದ ಕಳುಹಿಸುತ್ತಿದ್ದ ಎಸ್ಎಂಎಸ್ ಶುಲ್ಕ ಇನ್ಮುಂದೆ ಇರುವುದಿಲ್ಲ. ಸಂಪೂರ್ಣವಾಗಿ ಈ ಸೇವೆ ಉಚಿತವಾಗಿದೆ.
ಹತ್ತು ಸಾವಿರಕ್ಕಿಂತ ಹೆಚ್ಚು ಹಣ ಪಡೆದರೆ ಒಟಿಪಿ ಅಗತ್ಯವಿದೆ. ರಾತ್ರಿ 8 ರಿಂದ ಬೆಳಗ್ಗೆ 8 ರವರೆಗೆ ಒಪಿಟಿ ಅಗತ್ಯ. ಆದರೆ ಎಸ್ಬಿಐ ಬಿಟ್ಟು ಬೇರೆ ಯಾವುದೇ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡರೆ ಒಟಿಪಿ ಅಗತ್ಯವಿಲ್ಲವಂತೆ.