2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು ನಿಮ್ಮ ಬಜೆಟ್ ಮೀರಿರದಂತೆ ನೋಡಿಕೊಳ್ಳಬೇಕು.
ಹಾಗೆ ತೆರಿಗೆ ಉಳಿಸಲು ಸಾಲ ಪಡೆಯುವುದು ಸರಿಯಲ್ಲ. ತೆರಿಗೆದಾರರ ಉಳಿತಾಯ ಸಾಮರ್ಥ್ಯವು ಉದ್ಯೋಗ ನಷ್ಟ ಮತ್ತು ವೇತನ ಕಡಿತದಿಂದ ಪ್ರಭಾವಿತವಾಗಿರುತ್ತದೆ. ಇದು ಉಳಿತಾಯ ಅಥವಾ ಹೂಡಿಕೆಯ ಮೇಲೆ ಪರಿಣಾಮ ಬೀರಿದೆ.
ತೆರಿಗೆದಾರರು ಕೆಲವು ಖರ್ಚುಗಳ ಮೇಲೆ ತೆರಿಗೆ ಕಡಿತವನ್ನು ಪಡೆಯಬಹುದು. ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ಹೆಚ್ಚುವರಿ ಹೂಡಿಕೆ ಮಾಡದೆ ತೆರಿಗೆ ವಿನಾಯಿತಿಗಾಗಿ ಕೆಲವು ಖರ್ಚುಗಳನ್ನು ಸೂಚಿಸಲಾಗಿದೆ. ಮಕ್ಕಳ ಶಾಲೆ ಶುಲ್ಕ ಇದ್ರಲ್ಲಿ ಸೇರುತ್ತದೆ. ಸೆಕ್ಷನ್ 80ರ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ರಿಯಾಯಿತಿ ಪಡೆಯಬಹುದು. ಭಾರತದ ಯಾವುದೇ ಕಾಲೇಜು, ಶಾಲೆ, ವಿಶ್ವವಿದ್ಯಾಲಯ, ಯಾವುದೇ ಶಿಕ್ಷಣ ಸಂಸ್ಥೆಗೆ ಪಾವತಿಸುವ ಬೋಧನಾ ಶುಲ್ಕ ಇದಕ್ಕೆ ಸೇರುತ್ತದೆ. ಇದ್ರ ಲಾಭವನ್ನು ಇಬ್ಬರು ಮಕ್ಕಳಿಗೆ ಪಡೆಯಬಹುದು. ಕೋಚಿಂಗ್, ಹಾಸ್ಟೆಲ್ ಶುಲ್ಕ ಇದ್ರಲ್ಲಿ ಸೇರುವುದಿಲ್ಲ.
ಕೊರೊನಾ ನಂತರ ನಿಯಮಿತ ಆರೋಗ್ಯ ತಪಾಸಣೆ ಮತ್ತು ವಿಮೆ ಅನಿವಾರ್ಯವಾಗಿದೆ. ಆರೋಗ್ಯ ವಿಮೆಗಾಗಿ ಪಾವತಿಸಿದ ಪ್ರೀಮಿಯಂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಇದು ಕುಟುಂಬದಲ್ಲಿರುವ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ವಿಮೆ ಮಾಡಿಸಿದ ಎಲ್ಲ ವ್ಯಕ್ತಿಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಒಬ್ಬ ವ್ಯಕ್ತಿಯು, ಆತ, ಹೆಂಡತಿ ಮತ್ತು ಅವನ ಕುಟುಂಬ ಸೇರಿದಂತೆ ಮಕ್ಕಳಿಗೆ ಆರೋಗ್ಯ ವಿಮಾ ಕಂತುಗಳಲ್ಲಿ ಕಡಿತವನ್ನು ಪಡೆಯಬಹುದು.
ಹಣಕಾಸು ವರ್ಷದಲ್ಲಿ ತೆಗೆದುಕೊಂಡ ಗೃಹ ಸಾಲದ ಅಸಲು ಮೊತ್ತದಡಿ ಸೆಕ್ಷನ್ 80 ಸಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದು. ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವಾಗಿ 1.5 ಲಕ್ಷ ರೂಪಾಯಿಗಳ ರಿಯಾಯಿತಿ ಪಡೆಯಬಹುದು.