ಬೆಂಗಳೂರು: ಕ್ರಷರ್ ಮಾಲೀಕರು ರಾಜ್ಯಾದ್ಯಂತ ಡಿಸೆಂಬರ್ 22 ರಿಂದ ಹೋರಾಟ ಕೈಗೊಂಡಿದ್ದು, ಬಹುತೇಕ ನಿರ್ಮಾಣ ಕಾಮಗಾರಿಗಳಿಗೆ ಪೆಟ್ಟು ಬೀಳತೊಡಗಿದೆ.
ಜಲ್ಲಿ, ಎಂ ಸ್ಯಾಂಡ್, ಪೊ ಅಂಡ್ ಉತ್ಪನ್ನಗಳ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಮನೆ ನಿರ್ಮಾಣ, ಕಟ್ಟಡ, ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಗತ್ಯ ನಿರ್ಮಾಣ ಸಾಮಗ್ರಿ ಸಿಗದ ಕಾರಣ ಗುತ್ತಿಗೆದಾರರು ಮನೆ ನಿರ್ಮಿಸುವವರಿಗೆ ತೊಂದರೆ ಎದುರಾಗಿದೆ. ಸಂಗ್ರಹದಲ್ಲಿದ್ದ ಸಾಮಗ್ರಿ ಖಾಲಿಯಾಗುತ್ತಿರುವುದರಿಂದ ಬೇಡಿಕೆ ತೀವ್ರ ಏರಿಕೆಯಾಗುತ್ತಿದ್ದು, ದರ ಕೂಡ ಹೆಚ್ಚಾಗತೊಡಗಿದೆ.
ವಾರದ ಹಿಂದೆ ಪ್ರತಿ ಟನ್ ಗೆ 480 ರೂ. ನಷ್ಟು ಇದ್ದ ಎಂ. ಸ್ಯಾಂಡ್ ದರ ಈಗ 1100 -1300 ರೂ.ವರೆಗೆ ಏರಿಕೆಯಾಗಿದೆ. ಪಿ ಸ್ಯಾಂಡ್ ದರ 900 ರೂ.ನಿಂದ 1400 ರೂ.ವರೆಗೆ ಹೆಚ್ಚಳ ಕಂಡಿದೆ.