ಬೆಂಗಳೂರು: ಆಶ್ರಯ ಮನೆ ಸೇರಿದಂತೆ 10 ಲಕ್ಷ ರೂಪಾಯಿ ಒಳಗೆ ಮನೆ ನಿರ್ಮಿಸುವವರಿಗೆ ಉಚಿತವಾಗಿ ಮರಳು ಪೂರೈಕೆ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಶೀಘ್ರದಲ್ಲಿಯೇ ಹೊಸ ಮರಳು ನೀತಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಕ್ರಮ ಮರಳು ದಂಧೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿರುವ ಬಗ್ಗೆ ಸಚಿವರು ಮಾಹಿತಿ ನೀಡಿ, ರಾಜ್ಯದಲ್ಲಿ ಮರಳಿನ ಕೊರತೆ ಇಲ್ಲ. ಆಶ್ರಯ ಹಾಗೂ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವವರಿಗೆ ಉಚಿತವಾಗಿ ಮರಳು ಪೂರೈಕೆ ಮಾಡಲಾಗುವುದು. ಪ್ರತಿಟನ್ ಗೆ 100 -200 ರೂಪಾಯಿಗೆ ದರದಲ್ಲಿ ಮರಳು ಪೂರೈಕೆ ಮಾಡುವ ಕುರಿತು ಚಿಂತನೆ ಇದೆ. ಸರ್ಕಾರಿ ಕಟ್ಟಡ ಕಾಮಗಾರಿಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕವಾಗಿ ರಾಜಧನ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.