ನವದೆಹಲಿ: ಕೇಂದ್ರ ನೌಕರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ.
ನೌಕರರ ದಕ್ಷತೆಯನ್ನು ಆಧರಿಸಿ ವೇತನ ನೀಡಲಾಗುವುದು. ಕಂಪನಿಯ ಸಾಧನೆಗೆ ಅನುಗುಣವಾಗಿ ನೌಕರರಿಗೆ ವೇತನ ಕೊಡಲಾಗುವುದು ಎಂದು ಹೇಳಲಾಗಿದೆ. ದೇಶದಲ್ಲಿ ಸುಮಾರು 250 ಸರ್ಕಾರಿ ಸ್ವಾಮ್ಯದ ಕಂಪನಿಗಳಿದ್ದು, ಪ್ರಸಕ್ತ ವರ್ಷದಲ್ಲಿ 250 ಕಂಪನಿಗಳಿಂದ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆಯಲು ಕೇಂದ್ರ ಸರ್ಕಾರ ಗುರಿ ಹೊಂದಿದೆ.
ಈ ಕಂಪನಿಗಳಲ್ಲಿ 15 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 1.53 ಲಕ್ಷ ಕೋಟಿ ರೂಪಾಯಿ ವಾರ್ಷಿಕ ವೇತನ ಪಾವತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು, ನಿಗಮಗಳಲ್ಲಿ ಸಾಧನೆಗೆ ಅನುಗುಣವಾಗಿ ವೇತನ ಕೊಡಲಾಗುವುದು.
ಹೊಸ ನಿಯಮದಿಂದಾಗಿ ನೌಕರರಿಗೆ ವೇತನ ಕಡಿತದ ತೂಗುಕತ್ತಿ ಎದುರಾಗಿದೆ. ಸಾಧಾರಣ ಸಾಧನೆಯ ಕಂಪನಿಗಳ ನೌಕರರಿಗೆ ಶೇಕಡ 40 ರಷ್ಟು ವೇತನ ಕಡಿತ ಮಾಡಲಾಗುವುದು. ಅಂಕಗಳನ್ನು ಆಧರಿಸಿ ಕಂಪನಿಯನ್ನು ಅತ್ಯುತ್ತಮ ಕಂಪನಿ ಎಂದು ಗುರುತಿಸಲಾಗುತ್ತದೆ. ವರ್ಗೀಕರಣದ ಸಂದರ್ಭದಲ್ಲಿ ಕಳಪೆ ಸಾಧನೆ ತೋರಿದ ಕಂಪನಿಗಳ ನೌಕರರಿಗೆ ಶೇಕಡ 20 ಹಾಗೂ ಶೇಕಡ 40ರಷ್ಟು ವೇತನ ಕಡಿತವಾಗಲಿದೆ ಎಂದು ಹೇಳಲಾಗಿದೆ.