ನವದೆಹಲಿ: ಉಕ್ರೇನ್ -ರಷ್ಯಾ ಯುದ್ಧದ ಪರಿಣಾಮ ತೈಲ ದರದಲ್ಲಿ ಏರಿಕೆಯಾಗಿದೆ. ಈ ನಡುವೆ ರಷ್ಯಾ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ಒಪ್ಪಿಕೊಂಡಿದೆ.
ಯುದ್ಧ ಪೂರ್ವ ದರದ ಆಫರ್ ಮುಂದಿಟ್ಟಿರುವ ರಷ್ಯಾ ಇದೇ ಮೊದಲ ಬಾರಿಗೆ ರೂಪಾಯಿ –ರೂಬಲ್ ವಹಿವಾಟು ವಿನಿಮಯ ನಡೆಸಲು ಸಹಮತ ವ್ಯಕ್ತಪಡಿಸಿದೆ. ಪ್ರತಿ ಬ್ಯಾರೆಲ್ ಗೆ ಇಂದಿನ ದರಕ್ಕಿಂತ 35 ಡಾಲರ್ ಕಡಿಮೆ ಬೆಲೆಗೆ ಕಚ್ಚಾತೈಲ ಪೂರೈಕೆ ಮಾಡುವುದಾಗಿ ರಷ್ಯಾ ತಿಳಿಸಿದೆ.
ಅಂದ ಹಾಗೆ, ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಮೇಲೆ ಅನೇಕ ರಾಷ್ಟ್ರಗಳು ನಿರ್ಬಂಧ ಹೇರಿದ್ದು, ಕಚ್ಚಾತೈಲ ಖರೀದಿ ನಿಲ್ಲಿಸಿವೆ. ಈ ಸಂದರ್ಭದಲ್ಲಿ ತಟಸ್ಥ ನಿಲುವು ತಳೆದಿರುವ ಭಾರತಕ್ಕೆ ಭಾರಿ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಕೆ ಮಾಡಲು ರಷ್ಯಾ ಒಪ್ಪಿಕೊಂಡಿದೆ.
ರಷ್ಯಾ ಭಾರತಕ್ಕೆ ಈ ರಿಯಾಯಿತಿ ಆಫರ್ ನೀಡಿದ ಬೆನ್ನಲ್ಲೇ ಕಚ್ಚಾ ತೈಲ ದರ ಮತ್ತಷ್ಟು ಇಳಿಕೆಯಾಗಿದೆ. ಬ್ಯಾರೆಲ್ ಗೆ 10 ಡಾಲರ್ ನಷ್ಟು ಕಡಿಮೆಯಾಗಿದೆ. ಹಿಂದಿನ ದರಕ್ಕಿಂತ 35 ಡಾಲರ್ ಕಡಿಮೆ ಬೆಲೆಗೆ ಕಚ್ಚಾ ತೈಲ ಪೂರೈಕೆ ಮಾಡುವುದಾಗಿ ರಷ್ಯಾ ಹೇಳಿರುವುದರಿಂದ ಭಾರತಕ್ಕೆ ಭಾರೀ ಕಡಿಮೆ ಬೆಲೆಯಲ್ಲಿ ಕಚ್ಚಾತೈಲ ಪೂರೈಕೆಯಾಗಲಿದೆ.