
ನವದೆಹಲಿ: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿವೆ. ಇದರಿಂದಾಗಿ ಆರ್ಥಿಕ, ವಾಣಿಜ್ಯ ಬಿಕ್ಕಟ್ಟು ಎದುರಿಸುತ್ತಿರುವ ರಷ್ಯಾ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ಪ್ರಸ್ತಾಪ ಮುಂದಿಟ್ಟಿದೆ.
ರಷ್ಯಾದಿಂದ ಭಾರತಕ್ಕೆ ಡಿಸ್ಕೌಂಟ್ ದರದಲ್ಲಿ ಕಚ್ಚಾತೈಲ ಮತ್ತು ಇತರೆ ಸರಕುಗಳನ್ನು ಪೂರೈಕೆ ಮಾಡಲು ಪ್ರಸ್ತಾಪ ಮುಂದಿಡಲಾಗಿದ್ದು, ಇದನ್ನು ಭಾರತ ಪರಿಶೀಲಿಸಲಿದೆ. ಅಲ್ಲದೇ ರೂಪಾಯಿ ಕರೆನ್ಸಿಯಲ್ಲಿ ಹಣಕಾಸು ವರ್ಗಾವಣೆಗೂ ರಷ್ಯಾ ಸಮ್ಮತಿಸಿದೆ.
ಭಾರತ ತನ್ನ ಅಗತ್ಯದ ಶೇಕಡ 80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರಷ್ಯಾದಿಂದ ಶೇ. 2 ರಿಂದ 3 ರಷ್ಟು ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ತೈಲ ದರ ಭಾರಿ ಏರಿಕೆಯಾಗಿರುವುದರಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳುವ ಕುರಿತಾಗಿ ಭಾರತ ಪರಿಶೀಲಿಸುತ್ತಿದೆ.