ಇತ್ತೀಚಿನ ದಿನಗಳಲ್ಲಿ ಡಾಲರ್ ಎದುರು ಮುಗ್ಗರಿಸುತ್ತಲೇ ಇರುವ ರೂಪಾಯಿ ಮೌಲ್ಯ ಇಂದು ಮತ್ತೆ ಕುಸಿತ ಕಂಡಿದೆ. ರೂಪಾಯಿ ಮೌಲ್ಯ ಇಂದು ಮತ್ತೆ ಕುಸಿದು ಡಾಲರ್ ಎದುರು ರೂಪಾಯಿ ಮೌಲ್ಯ 83.06 ರೂ.ಗೆ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 6 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 83.06 ಕ್ಕೆ ತಲುಪಿದೆ. ಅಮೆರಿಕನ್ ಕರೆನ್ಸಿಯ ಪ್ರಾಬಲ್ಯ ಮತ್ತು ಹೂಡಿಕೆದಾರರ ನಿರುತ್ಸಾಹವೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಉಕ್ರೇನ್‌ನಲ್ಲಿ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳ, ಅಮೆರಿಕದ ಫೆಡ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ದರ ಹೆಚ್ಚಳ ಇವೆಲ್ಲವೂ ರೂಪಾಯಿ ಮೌಲ್ಯಕ್ಕೆ ಹೊಡೆತ ನೀಡುತ್ತಿವೆ.
ಇದಲ್ಲದೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೇರಿಕನ್ ಕರೆನ್ಸಿಯ ಬಲ ಹೆಚ್ಚಾಗಿದೆ. ದೇಶೀಯ ಷೇರುಗಳ ಬಗ್ಗೆ ನಕಾರಾತ್ಮಕ ಪ್ರವೃತ್ತಿಯೂ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ.