ನವದೆಹಲಿ: ವಾಹನ ನೋಂದಣಿ ನಿಯಮ ಸಡಿಲಿಕೆ ಮಾಡಲಾಗಿದೆ. ಪರಿಸರ ಮಾಲಿನ್ಯ ತಡೆಗೆ ಪೂರಕವಾದ ಬಿಎಸ್ ವಾಹನ ನೋಂದಣಿ ನಿಯಮವನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ.
ಈಗಾಗಲೇ ನೋಂದಣಿಯಾದ ವಾಹನಗಳನ್ನು ಕೂಡ ಬಿಎಸ್ ಸರಣಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ತೆರಿಗೆ ಪಾವತಿಸಿ ಹೊಸ ನೋಂದಣಿಯ ಮಾರ್ಗ ಪಡೆಯಬಹುದಾಗಿದೆ ಎಂದು ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಬಿಎಸ್ ನೋಂದಣಿಗೆ ಸಂಬಂಧಿತ ನಿಯಮ ಸಡಿಲಿಕೆ ಕುರಿತಂತೆ ಮನವಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿಯಮ 48ಕ್ಕೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಬಿಎಸ್ ಸರಣಿಗೆ ವಾಹನ ನೋಂದಣಿ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ವೈಯಕ್ತಿಕ ವಾಹನಗಳು ಬಿಎಸ್ ಸರಣಿಗೆ ಬದಲಾಗಿವೆ. ಇದರಿಂದ ನೋಂದಣಿಯಾದ ರಾಜ್ಯ ಬಿಟ್ಟು ಬೇರೆ ಕಡೆಯಲ್ಲಿ ವಾಹನಗಳು ಬಳಕೆಯಾಗುತ್ತಿದ್ದರೆ ನೋಂದಣಿಯ ಅವಶ್ಯಕತೆ ಇರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಕಾರ್ಮಿಕರು, ಖಾಸಗಿ ವಲಯದ ಕಂಪನಿಗಳ ನೌಕರರು, ಉದ್ಯೋಗಿಗಳು, ರಕ್ಷಣಾ ಸಿಬ್ಬಂದಿಗೆ ಬಿಎಸ್ ಪರಿವರ್ತನೆ ಸ್ವಯಂ ಪ್ರೇರಿತ ಆಯ್ಕೆಯಾಗಿದೆ.