
ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣಕ್ಕೆ RTO ಕಚೇರಿಗೆ ಅಲೆದಾಡಬೇಕಿಲ್ಲ.
ಆನ್ಲೈನ್ ನಲ್ಲಿ ಡಿಎಲ್ ಮತ್ತು ಎಲ್.ಎಲ್. ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಆನ್ಲೈನ್ ನಲ್ಲಿ ಹಲವು ಸೇವೆಗಳು ಲಭ್ಯವಿವೆ. ವಿಳಾಸ, ಹೆಸರು ತಿದ್ದುಪಡಿಗೂ ಅವಕಾಶ ನೀಡಲಾಗಿದೆ.
http://sarathi.parivahan.gov.in/sarathiservice ವೆಬ್ಸೈಟ್ ನಲ್ಲಿ ಸೇವೆ ಲಭ್ಯವಿದೆ. ಡಿಎಲ್ ನವೀಕರಣ, ಚಾಲನಾ ಪರವಾನಿಗೆ ನವೀಕರಣ, ವಿಳಾಸ, ಹೆಸರು ತಿದ್ದುಪಡಿಗೆ ಅವಕಾಶ ಇದೆ. ವಿಳಂಬ, ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರಿಗೆ ಇಲಾಖೆಯಿಂದ ಅನೇಕ ಕ್ರಮಕೈಗೊಳ್ಳಲಾಗಿದ್ದು, ಮನೆಯಲ್ಲೇ ಕುಳಿತು ಕೆಲವು ಸೇವೆ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.